ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ನಟ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ವಿಜಯಲಕ್ಷ್ಮಿ

‘ನಾಗಮಂಡಲ’ ಚಿತ್ರ ಖ್ಯಾತಿಯ ನಟಿ ವಿಜಯಲಕ್ಷ್ಮಿ ಮತ್ತೊಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನಾಮ್ ತಮಿಳರ್ ಕಚ್ಚಿ ನಾಯಕ, ನಟ-ನಿರ್ದೇಶಕ ಸೀಮನ್ ಅವರು ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿ ವಿಜಯಲಕ್ಷ್ಮಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ.

ಮದುವೆಯಾಗುತ್ತೇನೆ ಎಂದು ನಂಬಿಸಿ ಆತ ದೈಹಿಕವಾಗಿ ಸಂಪರ್ಕ ಬೆಳೆಸಿದ್ದಾನೆ, ನಂತರ ಬೆದರಿಕೆ ಹಾಕಿದ್ದಾನೆ. ಸೀಮನ್ ನನ್ನು ಬಂಧಿಸುವಂತೆ ನಟಿ ವಿಜಯಲಕ್ಷ್ಮಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಹೇಳಿದ ನಟಿ ವಿಜಯಲಕ್ಷ್ಮಿ “ನಾನು ಈ ಹಿಂದೆಯೂ ಸೀಮನ್ ವಿರುದ್ಧ ದೂರು ನೀಡಿದ್ದೇನೆ. ವರ್ಷಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಾರಿ ನಾನು ಪೊಲೀಸ್ ಮತ್ತು ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದೇನೆ. ಹಿಂದಿನ ಸರ್ಕಾರವು ಒಂದೇ ಒಂದು ತನಿಖೆಯನ್ನು ನಡೆಸಲಿಲ್ಲ” ಎಂದು ಹೇಳಿದ್ದಾರೆ. ವಿಜಯಲಕ್ಷ್ಮಿ ಸೀಮನ್ ವಿರುದ್ಧ ಈ ಹಿಂದೆಯೂ ಈ ಆರೋಪಗಳನ್ನು ಮಾಡಿದ್ದಾರೆ.

ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನ

2020 ರಲ್ಲಿ, ವಿಜಯಲಕ್ಷ್ಮಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆದ ನಂತರ ಆತ್ಮಹತ್ಯೆ ಗೆ ಯತ್ನಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ‘ಪನಾನ್ ಕಟ್ಟು ಪಡೈ’ ಚಿತ್ರದ ಸೀಮನ್ ಮತ್ತು ಹರಿ ನಾಡಾರ್ ಅವರು ತಮ್ಮ ಸಾವಿಗೆ ಕಾರಣ ಎಂದು ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಆತ್ಮಹತ್ಯೆಗೆ ಪ್ರಯತ್ನಿಸಿದರು. ಆದರೆ ಅವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದ ಹಿನ್ನೆಲೆ ಅವರು ಸಾವಿನ ದವಡೆಯಿಂದ ಪಾರಾಗಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read