BREAKING : ನಿರ್ಮಾಪಕರ ವಿರುದ್ಧ ಕಿಚ್ಚನ ಕಾನೂನು ಸಮರ : ಮಾನನಷ್ಟ ಕೇಸ್ ದಾಖಲಿಸಲು ಕೋರ್ಟ್ ಗೆ ಹಾಜರಾದ ನಟ ಸುದೀಪ್

ಬೆಂಗಳೂರು : ನಟ ಸುದೀಪ್ ಹಾಗೂ ನಿರ್ಮಾಪಕರ ನಡುವಿನ ಫೈಟ್ : ತಾರಕಕ್ಕೇರಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸಲು ಕೋರ್ಟ್ ಗೆ ನಟ ಕಿಚ್ಚ ಸುದೀಪ್ ಹಾಜರಾಗಿದ್ದಾರೆ.

ಬೆಂಗಳೂರು ಜೆಎಂಎಫ್ ಸಿ ಕೋರ್ಟ್ ಗೆ ನಟ ಕಿಚ್ಚ ಸುದೀಪ್ ಹಾಜರಾಗಿದ್ದು, ಕೆಲವೇ ಕ್ಷಣಗಳಲ್ಲಿ ನಿರ್ಮಾಪಕರ ವಿರುದ್ಧ ಕೇಸ್ ಹಾಕಲಿದ್ದಾರೆ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಹಾಗೂ ಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಚಿತ್ರಕ್ಕಾಗಿ ಮುಂಗಡವಾಗಿ ಹಣ ಪಡೆದು ಸಿನಿಮಾ ಮಾಡಿಲ್ಲ ಎಂದು ಎಂ ಎನ್ ಕುಮಾರ್ ಮತ್ತು ರೆಹಮಾನ್ ಆರೋಪ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಿರ್ಮಾಪಕ ಎಂ ಎನ್ ಕುಮಾರ್ ಮಾಡಿದ ಆರೋಪಗಳಿಗೆ ಇತ್ತೀಚೆಗೆ ನಟ ಕಿಚ್ಚ ಸುದೀಪ್ ಉತ್ತರ ನೀಡಿದ್ದರು.ಕುಮಾರ್ ಮಾಡಿದ ಆರೋಪಕ್ಕೆ ಉತ್ತರ ನೀಡಿದ ಸುದೀಪ್ 10 ಕೋಟಿ ರೂs ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿದ್ದರು. ಹಾಗೆಯೇ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿದ್ದಾರೆ, ಸಮಾಜ ಸೇವೆಯ ಮೂಲಕ ಹಲವರಿಗೂ ಮಾದರಿಯಾಗಿದ್ದಾರೆ, ನೀವು ಮಾಡಿರುವ ಆರೋಪ ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿದ್ದೀರಾ..? ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ನೀಡಬೇಕು ಎಂದು ಸುದೀಪ್ ಪರ ವಕೀಲರು ಲೀಗಲ್ ನೋಟಿಸ್ ನೀಡಿದ್ದರು. ಸುದ್ದಿಗೋಷ್ಟಿಯಲ್ಲಿ ಅಧಾರ ರಹಿತ ಆರೋಪ ಮಾಡಿದ್ದಾರೆ. ಆದ್ದರಿಂದ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಬೇಕೆಂದು ನೋಟಿಸ್ ನಲ್ಲಿ ತಾಕೀತು ಮಾಡಿದ್ದರು. ಕೆಲವು ದಿನಗಳ ಹಿಂದೆ ಸುದ್ದಿಗೋಷ್ಟಿ ನಡೆಸಿದ ಕುಮಾರ್ ಕಿಚ್ಚ ಸುದೀಪ್ ಗೆ ಒಂದು ಸಿನಿಮಾದ ಅಡ್ವಾನ್ಸ್ ಕೊಟ್ಟಿದ್ದೇನೆ, ಆದರೆ ಅವರು ಕೈಗೆ ಸಿಗುತ್ತಿಲ್ಲ. ಹಣಕೊಟ್ಟು ಬೇಡುವ ಸ್ಥಿತಿಬಂದಿದೆ ಎಂದು ಕುಮಾರ್ ವಾಣಿಜ್ಯ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read