ಹಾಸನ: ಹಾಸನಾಂಬೆ ದೇವಿ ದರ್ಶನಕ್ಕೆ ಭಾನುವಾರವೂ ಭಕ್ತ ಸಾಗರವೇ ಹರಿದು ಬಂದಿದೆ. ನಟರಾದ ಶಿವರಾಜ್ ಕುಮಾರ್ ಮತ್ತು ರಿಷಬ್ ಶೆಟ್ಟಿ ದಂಪತಿ ಇಂದು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್ ಸ್ಥಳದಲ್ಲಿ ಜನರನ್ನು ನಿಯಂತಿಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಮಾತನಾಡಿದರು. ಬಳಿಕ ದೇವಾಲಯಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.
ನಟ ರಿಷಬ್ ಶೆಟ್ಟಿ ಕುಟುಂಬ ಸಹಿತರಾಗಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ನಟರನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾಗಿತ್ತು. ಅಭಿಮಾನಿಗಳು ನಟರೊಂದಿಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಭಾನುವಾರದ ಅಪ್ಡೇಟ್
ಇಂದು ಭಕ್ತರಿಗೆ ಸುಗಮ ದರ್ಶನವಾಗಿದೆ. ನೈವೇದ್ಯ ಮತ್ತು ಪೂಜೆಗಾಗಿ ಮಧ್ಯಾಹ್ನ 2 ರಿಂದ 3:30 ರವರೆಗೆ ದೇವಿಯ ದರ್ಶನ ಇರುವುದಿಲ್ಲ.
Important:
ಇಂದು ರಾತ್ರಿ 8 ಗಂಟೆಗೆ ದೇವಾಲಯದ ಗೇಟ್‌ಗಳನ್ನು ಮುಚ್ಚಲಾಗುತ್ತದೆ. ಇಂದು ಮಧ್ಯರಾತ್ರಿ 12 ಗಂಟೆಗೆ ದರ್ಶನ ನಿಲ್ಲಲಿದೆ. ನಾಳೆ (ಸೋಮವಾರ) ಬೆಳಗ್ಗೆ 5 ಗಂಟೆಗೆ ದರ್ಶನ ಮತ್ತೆ ಆರಂಭವಾಗಲಿದೆ. ಈ ಬಾರಿ ದೀಪಾವಳಿಯ ಹಿಂದಿನ ರಾತ್ರಿ ವಿಶೇಷ ಪೂಜೆ ಇದೆ. ಇದು ದೇವಾಲಯದ ಕಡ್ಡಾಯ ಆಚರಣೆಯಾಗಿದ್ದು, ಭಕ್ತಾದಿಗಳು ಇಂದು (ಭಾನುವಾರ) ರಾತ್ರಿ 8 ಗಂಟೆಯ ನಂತರ ಬಂದರೆ ನಿಮ್ಮ ದರ್ಶನವು ನಾಳೆ ಬೆಳಿಗ್ಗೆ (ಸೋಮವಾರ) ಸಾಧ್ಯವಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
