‘3 ಈಡಿಯಟ್ಸ್’ ಚಿತ್ರದ ಆಡಿಷನ್​ ವಿಡಿಯೋ ರಿಲೀಸ್;‌ ಆರ್. ಮಾಧವನ್‌ ಡೈಲಾಗ್‌ ವೈರಲ್

‘3 ಈಡಿಯಟ್ಸ್’ ಚಿತ್ರ ಎಲ್ಲರ ಹೃದಯದಲ್ಲಿ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಲ್ಲಿ ತಿಳಿಸಿರುವ ಸಂದೇಶ ಹಲವರ ನನಪಿನಾಳದಲ್ಲಿ ಉಳಿಯುವಂತೆ ಮಾಡಿದೆ. ಈ ಚಿತ್ರದಲ್ಲಿ ಬರುವ ರಾಂಚೋ, ಫರ್ಹಾನ್ ಮತ್ತು ರಾಜು ಅವರಂತಹ ನಿಜವಾದ ಸ್ನೇಹಿತರನ್ನು ನಿಜ ಜೀವನದಲ್ಲಿಯೂ ಕಂಡುಕೊಳ್ಳಲು ಯುವ ಪೀಳಿಗೆ ಪ್ರಯತ್ನಿಸುವುದೂ ಸುಳ್ಳಲ್ಲ.

ಈ ಚಿತ್ರದಲ್ಲಿ ಆಮೀರ್ ಖಾನ್, ಶರ್ಮನ್ ಜೋಶಿ ಹಾಗೂ ಆರ್. ಮಾಧವನ್ ಅದ್ಭುತವಾಗಿ ನಟಿಸಿದ್ದಾರೆ. ಈಗ, ಫರ್ಹಾನ್ ಖುರೇಷಿ ಪಾತ್ರಕ್ಕಾಗಿ ಆರ್. ಮಾಧವನ್ ಅವರ ಆಡಿಷನ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.

ಜನವರಿ 31 ರಂದು ವಿಧು ವಿನೋದ್ ಚೋಪ್ರಾ ಫಿಲ್ಮ್‌ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಫರ್ಹಾನ್ ತನ್ನ ತಂದೆಯ ಬಳಿ ತನಗೆ ಎಂಜಿನಿಯರಿಂಗ್ ಪದವಿ ಬೇಡ, ಬದಲಿಗೆ ವನ್ಯಜೀವಿ ಛಾಯಾಗ್ರಹಣವನ್ನು ಮುಂದುವರಿಸಲು ಅವಕಾಶ ನೀಡುವಂತೆ ಬೇಡಿಕೊಳ್ಳುತ್ತಾನೆ. ಟೇಪ್‌ನಲ್ಲಿ ಅವರ ಪ್ರಸಿದ್ಧ “ಮಿಸ್ಟರ್ ಕಪೂರ್ ಕ್ಯಾ ಸೋಚ್ತೆ ಹೈ ಫರಕ್ ನಹೀ ಪಡ್ತಾ (ಶ್ರೀ ಕಪೂರ್ ಏನು ಯೋಚಿಸುತ್ತಾರೆ ಎಂದು ನಾನು ಹೆದರುವುದಿಲ್ಲ) ಡೈಲಾಗ್​ನಿಂದ ಹಿಡಿದು ಅವರ ವಿವಿಧ ಡೈಲಾಗ್ ಗಳನ್ನು ಕೇಳಬಹುದಾಗಿದೆ.

ಈ ವಿಡಿಯೋ ಭಾರಿ ವೈರಲ್​ ಆಗಿದ್ದು, ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ಅನೇಕ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ಹೃದಯದ ಎಮೋಜಿಯನ್ನು ಶೇರ್​ ಮಾಡಿದ್ದಾರೆ.

https://youtu.be/_qhNhlGlcPk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read