ಬೆಂಗಳೂರು: ಕಿರುತೆರೆ ಕಲಾವಿದ, ನಟ ಮಡೆನೂರು ಮನು ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಆರೋಪಿ ಮನು ವಿಚಾರಣೆ ನಡೆಸಲಾಗಿದೆ.
ಇಂದು ಮಡೆನೂರು ಮನು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದಾರೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಸಂತ್ರಸ್ತೆ ನಟಿ ಜೊತೆಗೆ ಒಡನಾಟ ಮತ್ತು ಆಕೆ ಆರೋಪದ ಕುರಿತಾಗಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಇಂದು ಸಂತ್ರಸ್ತ ನಟಿಯನ್ನು ಕರೆಸಿ ಪೊಲೀಸರು ಹೇಳಿಕೆ ದಾಖಲಿಸಲಿದ್ದಾರೆ. ಕೋರ್ಟ್ ನಲ್ಲಿ 164 ಸ್ಟೇಟ್ಮೆಂಟ್ ದಾಖಲಿಸಲು ಪೊಲೀಸರಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಂತ್ರಸ್ತೆ ದೂರು ದುರುದ್ದೇಶಪೂರಿತವಾಗಿದ್ದು, ಒಳಸಂಚು ಮಾಡಿ ಕೆಲವರು ದೂರು ಕೊಡಿಸಿದ್ದಾರೆ ಎಂದು ಮಡನೂರು ಮನು ಹೇಳಿಕೆ ನೀಡಿದ್ದಾರೆ. ಇಂದು ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಮಡೆನೂರು ಮನು ಬಂಧಿತರಾಗಿದ್ದಾರೆ.