ಮೈಸೂರು : ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ ಹಾಗೂ ಅವರ ಬಹುಕಾಲದ ಗೆಳತಿ ಡಾ.ಧನ್ಯತಾ ಅವರ ವಿವಾಹ ಮಹೋತ್ಸವವು ಮೈಸೂರಿನಲ್ಲಿ ನೆರವೇರುತ್ತಿದೆ.
ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ನಾಳೆ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಹಳದಿ ಕಾರ್ಯಕ್ರಮದ ಫೋಟೋ ವೈರಲ್ ಆಗಿದೆ. ಆತ್ಮೀಯ ಸಮಾರಂಭದಲ್ಲಿ ಹತ್ತಿರದ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸುತ್ತಿದ್ದಾರೆ.
ಹಳದಿ ಸಮಾರಂಭವು ನಿನ್ನೆ (ಫೆಬ್ರವರಿ 14) ರಂದು ನಡೆದಿದ್ದು, ಡಾಲಿ ಧನಂಜಯ್ –ಧನ್ಯತಾ ಜೋಡಿ ಅರಿಶಿಣದಲ್ಲಿ ಮಿಂದೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿದೆ.
ಧನಂಜಯ ಅವರ ಮದುವೆಗೆ ಸ್ಯಾಂಡಲ್ ವುಡ್ ನ ತಾರೆಯರು ಹಾಜರಾಗಲಿದ್ದು, ಇಂದು ಸಂಜೆ ನಡೆಯಲಿರುವ ವಿವಾಹ ಆರತಕ್ಷತೆಗೆ ಸ್ಯಾಂಡಲ್ ವುಡ್ ನ ಅನೇಕ ನಟರು ಹಾಜರಾಗುವ ನಿರೀಕ್ಷೆಯಿದೆ. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ, ತೆಲುಗು ಸ್ಟಾರ್ ಗಳಾದ ಚಿರಂಜೀವಿ, ಅಲ್ಲು ಅರ್ಜುನ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರನ್ನು ಅವರು ಆಹ್ವಾನಿಸಿದ್ದಾರೆ.