ಚಿತ್ರದುರ್ಗ : ಚಿತ್ರದುರ್ಗ ನಗರದ ಮುರುಘಾಮಠಕ್ಕೆ ನಟ ಧ್ರುವ ಸರ್ಜಾ ಭೇಟಿ ನೀಡಿ ಮುರುಘಾ ಶರಣರ ಗದ್ದುಗೆಯ ದರ್ಶನ ಪಡೆದರು .
ನಟ ಧ್ರುವ ಸರ್ಜಾ ಬರುತ್ತಿರುವ ವಿಚಾರ ಗೊತ್ತಾಗಿ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಧ್ರುವ ಸರ್ಜಾರನ್ನು ನೋಡಿದ ಅಭಿಮಾನಿಗಳು ಡಿ ಬಾಸ್ ಎಂದು ಕೂಗಿದರು. ಹಿರಿಯೂರಿನ ಬಳಿ ನಟ ಧ್ರುವ ಸರ್ಜಾ ಕಾರು ಹತ್ತುವಾಗ ಕೆಲವರು ಡಿ ಬಾಸ್ ಗೆ ಜೈ ಎಂದು ಕೂಗಿದ್ದಾರೆ. ಧ್ರುವ ದರ್ಜಾ ಎದುರು ನಮ್ಮ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಕೂಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ನಟ ಧ್ರುವ ಸರ್ಜಾ ಆಗಮನ ಹಿನ್ನೆಲೆಯಲ್ಲಿ ಮುರುಘಾ ಮಠದಲ್ಲಿ ಬಿಗಿ ಬಂದೋಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸದ್ಯ. ನಟ ಧ್ರುವ ಸರ್ಜ ಮಾರ್ಟಿನ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬರುತ್ತಿದೆ. ಕನ್ನಡದ ಮಾರ್ಟಿನ್ ಚಿತ್ರದ ಟ್ರೈಲರ್ 13 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
Dhruva Boss Fans super Boss#DhruvaSarja #Martin #MartinTheMovie @DhruvaSarja #Kdthedevil pic.twitter.com/m6RTNneWNx
— D S Army (@DSArmy176110) August 2, 2024