BREAKING: ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ ಧ್ರುವ ಸರ್ಜಾ ‘ಮಾರ್ಟಿನ್’ ಚಿತ್ರತಂಡ

ಬೆಂಗಳೂರು: ವಿಮಾನ ಅಪಘಾತದಿಂದ ನಟ ಧ್ರುವ ಸರ್ಜಾ ‘ಮಾರ್ಟಿನ್’ ಚಿತ್ರತಂಡ ಕೂದಲೆಳೆ ಅಂತರದಲ್ಲಿ ಪಾರಾಗಿದೆ.

ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ನಿನ್ನೆ ಹಾಡಿನ ಚಿತ್ರೀಕರಣ ಮುಗಿಸಿ ಶ್ರೀನಗರದಿಂದ ದೆಹಲಿಗೆ ಇಂಡಿಗೋ ಫ್ಲೈಟ್ ನಲ್ಲಿ ಬರುವಾಗ ಘಟನೆ ನಡೆದಿದೆ.

ನಟ ಧ್ರುವ ಸರ್ಜಾ ಮಾಹಿತಿ ಹಂಚಿಕೊಂಡಿದ್ದು, ವಿಮಾನ ಅಪಘಾತದಿಂದ ‘ಮಾರ್ಟಿನ್’ ಚಿತ್ರತಂಡ ಪಾರಾಗಿದೆ. ಪೈಲಟ್ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಶ್ರೀನಗರದಿಂದ ‘ಮಾರ್ಟಿನ್’ ಚಿತ್ರ ತಂಡ ದೆಹಲಿಗೆ ಬರುವಾಗ ಘಟನೆ ನಡೆದಿದೆ. ಅದೃಷ್ಟವಶಾತ್ ಪಾರಾಗಿದ್ದೇವೆ. ಜೈ ಆಂಜನೇಯ, ಜೈ ಶ್ರೀರಾಮ್ ಎಂದು ಹೇಳಿದ್ದಾರೆ.

ಹವಾಮಾನ ವೈಪರೀತ್ಯದ ಕಾರಣ ಏಕಾಏಕಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ ಪೈಲಟ್ ಪರದಾಟ ನಡೆಸಿದ್ದಾರೆ. ‘ಮಾರ್ಟಿನ್’ ಚಿತ್ರತಂಡ ಸೇರಿದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಗಾಬರಿಕೊಂಡಿದ್ದಾರೆ. ಸೀಟುಗಳು ಅಲ್ಲಾಡಿವೆ. ಕುಳಿತಿದ್ದ ಸ್ಥಳದಲ್ಲೇ ಜೀವ ಉಳಿದರೆ ಸಾಕು ಎಂದು ಪ್ರಯಾಣಿಕರು ದೇವರ ನೆನೆದು ಆತಂಕದಿಂದ ಕಣ್ಣೀರಿಟ್ಟಿದ್ದಾರೆ. ಕೊನೆಗೆ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಚಿತ್ರತಂಡ, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

https://www.instagram.com/reel/C3iilTASNp6/?utm_source=ig_web_copy_link

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read