BIG NEWS: ನಟ ದರ್ಶನ್ ಲಾಂಗ್ ಪ್ರದರ್ಶನ ವಿಚಾರ; ಪೊಲೀಸ್ ಕಮಿಷನರ್ ದಯಾನಂದ್ ಹೇಳಿದ್ದೇನು?

ಬೆಂಗಳೂರು: ಹುಲಿ ಉಗುರು, ಮಹಿಳೆಯ ಮೇಲೆ ನಾಯಿ ದಾಳಿ ಸಂಕಷ್ಟದ ಬೆನ್ನಲ್ಲೇ ಚಾಲೇಂಜಿಂಗ್ ಸ್ಟಾರ್ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಾಂಗ್ ಪ್ರದರ್ಶನ ಮಾಡಿದ ವಿಚಾರವಾಗಿ ಕಾನೂನು ಕ್ರಮ ಎದುರಿಸಬೇಕಾದ ಸಾಧ್ಯತೆ ದಟ್ಟವಾಗಿದೆ.

ಎರಡು ದಿನಗಳ ಹಿಂದೆ ನಟ ದರ್ಶನ್ ಗೆ ಅಭಿಮಾನಿಗಳು ಬೆಳ್ಳಿಯ ಲಾಂಗ್ ನೀಡಿದ್ದು, ಇದನ್ನು ಪ್ರದರ್ಶಿಸಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಲಾಂಗ್ ಹಿಡಿದು ಪ್ರದರ್ಶಿಸಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಅದು ಒರಿಜಿನಲ್ ಲಾಂಗ್ ಆಗಿದ್ದರೆ ದರ್ಶನ್ ವಿರುದ್ಧ ಕಾನೂನು ಕ್ರಮವಾಗಲಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುದು. ತಪ್ಪು ಕಂಡು ಬಂದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read