ತಮಿಳು ಚಿತ್ರರಂಗದಲ್ಲಿ ತಮ್ಮ ಮಾಸ್ ಸಿನಿಮಾಗಳ ಮೂಲಕವೇ ದೊಡ್ಡ ಅಭಿಮಾನಿಗಳ ದಂಡೆ ಹೊಂದಿರುವ ದಳಪತಿ ವಿಜಯ್ ಇಂದು ತಮ್ಮ ಐವತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ದೇಶದಲ್ಲೆಡೆ ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ.
1984ರಲ್ಲಿ ತೆರೆಕಂಡ ‘ವೆಟ್ರಿ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ‘ಕುದುಂಬಂ’ ಸೇರಿದಂತೆ ‘ನಾನ್ ಸಿಗಪ್ಪು ಮಾನಿತನ್’ ‘ವಸಂತ ರಾಗಂ’ ನಲ್ಲಿ ಬಾಲ ನಟನಾಗಿ ಮಿಂಚಿದರು. 1992ರಲ್ಲಿ ಬಿಡುಗಡೆಯಾದ ನಾಳಯ್ಯ ತೀರ್ಪು ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡರು ಬಳಿಕ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತಮಿಳು ಚಿತ್ರರಂಗದ ಬೇಡಿಕೆಯ ನಟರಾದರು.
ಕಳೆದ ವರ್ಷ ವರಿಸು ಹಾಗೂ ಲಿಯೋ ದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಇತ್ತೀಚಿಗೆ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಾಗೂ ಸಿನಿತಾರೆಯರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
https://twitter.com/NayantharaU/status/1804221123820949770?ref_src=twsrc%5Egoogle%7Ctwcamp%5Eserp%7Ctwgr%5Etweet
https://twitter.com/actorsathish/status/1804227722627158364?ref_src=twsrc%5Egoogle%7Ctwcamp%5Eserp%7Ctwgr%5Etweet
https://twitter.com/PDdancing/status/1804341143133655538?ref_src=twsrc%5Egoogle%7Ctwcamp%5Eserp%7Ctwgr%5Etweet