ಹುಟ್ಟು ಹಬ್ಬದ ಸಂಭ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಆರೋಗ್ಯದಲ್ಲಿ ಏರು ಪೇರು ವದಂತಿ: ಆತಂಕಗೊಂಡು ನಿಟ್ಟುಸಿರು ಬಿಟ್ಟ ಅಭಿಮಾನಿಗಳು – Rising Kannada

ತಮ್ಮ ಮಾಸ್ ಡೈಲಾಗ್ ಮೂಲಕ ಅಭಿಮಾನಿಗಳ ದಂಡು ಹೊಂದಿರುವ ಆಕ್ಷನ್  ಪ್ರಿನ್ಸ್ ಧ್ರುವ ಸರ್ಜಾ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2012ರಲ್ಲಿ ಎಪಿ ಅರ್ಜುನ್ ನಿರ್ದೇಶನದ ‘ಅದ್ದೂರಿ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಧ್ರುವ ಸರ್ಜಾ ಎರಡು- ಮೂರು ವರ್ಷಕ್ಕೊಂದು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟರಾಗಿದ್ದಾರೆ.

ಅದ್ದೂರಿ, ಬಹದ್ದೂರ್ ಹಾಗೂ ‘ಭರ್ಜರಿ’ ಚಿತ್ರದ ಮೂಲಕ ಹ್ಯಾಟ್ರಿಕ್ ಜಯ ಕಂಡಿದ್ದ ಧ್ರುವ ಸರ್ಜಾ 2021ರಲ್ಲಿ ಪೊಗರು ಸಿನಿಮಾದಲ್ಲಿ ಅಭಿನಯಿಸಿದ್ದರು. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡರೂ ಈ ಚಿತ್ರಕ್ಕೆ ಅಷ್ಟೊಂದು ಯಶಸ್ಸು ಸಿಗಲಿಲ್ಲ.

ಇದೀಗ ಎಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾರ್ಟಿನ್’ ಸಿನಿಮಾ ತನ್ನ ಟೀಸರ್ ಮೂಲಕವೇ ಭರ್ಜರಿ ಸೌಂಡ್ ಮಾಡಿದ್ದು, ಡಿಸೆಂಬರ್ 22ರಂದು 5 ಭಾಷೆಯಲ್ಲಿ ತೆರೆ ಕಾಣಲಿದೆ. ಇದರ ಬೆನ್ನಲ್ಲೇ ಕೇಡಿ ಚಿತ್ರದ ಶೂಟಿಂಗ್ ನಲ್ಲಿ ಧ್ರುವ ಸರ್ಜಾ ಬಿಜಿಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read