ವಾಸ್ತು ಶಾಸ್ತ್ರದ ಪ್ರಕಾರ ಶಿಶುವಿನ ಮೇಲೆ ಪ್ರಭಾವ ಬೀರುತ್ತೆ ಗರ್ಭಿಣಿ ಮಾಡುವ ಈ ಕೆಲಸ

ಗರ್ಭಿಣಿಯರು ಅನೇಕ ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಗರ್ಭಿಣಿ ನಡವಳಿಕೆ ಆಕೆ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಒಳ್ಳೆ ವಿಷ್ಯದ ಬಗ್ಗೆ ಆಲೋಚನೆ ಮಾಡುವಂತೆ ಸಲಹೆ ನೀಡ್ತಾರೆ. ವಾಸ್ತು ಶಾಸ್ತ್ರದಲ್ಲಿಯೂ ಗರ್ಭಿಣಿಯರಿಗೆ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಇದನ್ನು ಪಾಲಿಸಿದ ಗರ್ಭಿಣಿ ಸಂಸ್ಕಾರಿ ಹಾಗೂ ಸೌಭಾಗ್ಯವತಿ ಮಗುವನ್ನು ಪಡೆಯುತ್ತಾಳೆ.

ವಾಸ್ತು ಶಾಸ್ತ್ರದ ಪ್ರಕಾರ ಗರ್ಭಿಣಿ ಮರೆತೂ ದಕ್ಷಿಣ ದಿಕ್ಕಿನಲ್ಲಿ ಮಲಗಬಾರದು. ಈ ದಿಕ್ಕಿನಲ್ಲಿ ಮಲಗುವುದು ಅಶುಭ. ಇದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಹಡಿ ಏರುವ ಮೆಟ್ಟಿಲ ಕೆಳಗೆ ಮಲಗಬಾರದು. ಅಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿರುತ್ತದೆ.

ಗರ್ಭಿಣಿಯರು ಗಾಢವಾದ ಕಪ್ಪು ಅಥವಾ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬಾರದು. 9 ತಿಂಗಳವರೆಗೆ ತಿಳಿ ಬಣ್ಣದ ಗುಲಾಬಿ ಬಟ್ಟೆಗಳನ್ನು ಹೆಚ್ಚಾಗಿ ತೊಡಬೇಕು.

ಗರ್ಭಿಣಿಯರು ಎಲೆಕ್ಟ್ರಾನಿಕ್ ವಸ್ತುಗಳಾದ ಕಂಪ್ಯೂಟರ್, ಲ್ಯಾಪ್ ಟಾಪ್ ಗಳಿಂದ ದೂರವಿರುವುದು ಒಳ್ಳೆಯದು.

ಗರ್ಭಿಣಿ ಇರುವ ಮನೆಯ ಮುಖ್ಯ ಭಾಗ ಆದಷ್ಟು ಖಾಲಿಯಿರುವುದು ಒಳ್ಳೆಯದು. ಹೆಚ್ಚು ಖುರ್ಚಿಗಳಿದ್ದರೆ ಅಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿರುತ್ತದೆ.

ಗಾಢವಾದ ಬಣ್ಣ ಬಳಿದಿರುವ ಗೋಡೆ ಹಾಗೂ ಕಡಿಮೆ ಬೆಳಕಿರುವ ಸ್ಥಳದಲ್ಲಿ ಗರ್ಭಿಣಿಯರು ಕುಳಿತುಕೊಳ್ಳಬಾರದು. ಶುದ್ಧವಾದ ಗಾಳಿ ಹಾಗೂ ಬೆಳಕಿರುವ ಜಾಗದಲ್ಲಿ ಕುಳಿತುಕೊಳ್ಳಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read