ನದಿಯಲ್ಲಿ ಕಾಲು ತೊಳೆಯುವಾಗಲೇ ಅವಘಡ: ನೀರು ಪಾಲಾದ ವೃದ್ಧ

ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ ಗ್ರಾಮದ ಸಮೀಪ ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ವೃದ್ಧರೊಬ್ಬರು ನೀರು ಪಾಲಾಗಿದ್ದಾರೆ.

ಕಲ್ಲಪ್ಪ ಹುರುಳಿಕುಪ್ಪಿ(80) ನೀರು ಪಾಲಾದವರು ಎಂದು ಹೇಳಲಾಗಿದೆ. ಹಾನಗಲ್ ತಾಲೂಕಿನ ಚಾತ್ರಾನಾಯಕನಕೊಪ್ಪ ನಿವಾಸಿಯಾಗಿರುವ ಅವರು ನದಿಯಲ್ಲಿ ಕಾಲು ತೊಳೆಯಲು ಹೋದಾಗ ಘಟನೆ ಸಂಭವಿಸಿದೆ. ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read