ಉದಯಪುರದಲ್ಲಿ ಮದುವೆ ಆಗ್ತಿದ್ದಾರೆ ಅಮೀರ್ ಖಾನ್ ಪುತ್ರಿ…….ದಂಗಾಗಿಸುವಂತಿದೆ ಇದರ ವೆಚ್ಚ…!

ಅಮೀರ್ ಖಾನ್  ಪುತ್ರಿ ಐರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಕೈ ಹಿಡಿಯಲಿದ್ದಾರೆ. ಈಗಾಗಲೇ ಕೋರ್ಟ್‌ ನಲ್ಲಿ ಈ ಜೋಡಿ ವಿವಾಹವಾಗಿದ್ದು, ಉದಯಪುರದಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯ ನಡೆಯಲಿದೆ. ಉದಯಪುರದ ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ಐರಾ ಮತ್ತು ನೂಪುರ್ ಮದುವೆ ನೆರವೇರಲಿದೆ. ಮೆಹೆಂದಿ ಕಾರ್ಯಕ್ರಮದ ಹೊರತಾಗಿ ಇಂದು ಪಜಾಮ ಪಾರ್ಟಿಯನ್ನು ಆಯೋಜನೆ ಮಾಡಲಾಗಿದೆ.

ಅನೇಕ ಸೆಲೆಬ್ರಿಟಿಗಳ ಮದುವೆಯ ಫೆವರೆಟ್‌ ಸ್ಫಾಟ್‌ ಉದಯಪುರ. ಈಗ ಅಮೀರ್‌ ಖಾನ್‌ ಮಗಳ ಮದುವೆ ನಡೆಯುತ್ತಿರುವ ತಾಜ್ ಲೇಕ್ ಪ್ಯಾಲೇಸ್, ಉದಯಪುರದಲ್ಲಿರುವ 5 ಸ್ಟಾರ್ ದರ್ಜೆಯ ಹೋಟೆಲ್ ನಲ್ಲಿ ಒಂದು. ಈ ಹೋಟೆಲ್ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಈ ಹೋಟೆಲ್‌ ರಜಪೂತ ನೋಟದಲ್ಲಿರೋದು ಎಲ್ಲರನ್ನು ಆಕರ್ಷಿಸುತ್ತದೆ. ಅಲ್ಲದೆ ಇದು ಸುಂದರವಾದ ಪಿಚೋಲಾ ಸರೋವರದಿಂದ ಆವೃತವಾಗಿದೆ.

ಒಂದು ಪ್ಲೇಟ್‌ ಆಹಾರಕ್ಕೆ ಇಷ್ಟು ಬೆಲೆ: ತಾಜ್ ಲೇಕ್ ಪ್ಯಾಲೇಸ್‌ ದುಬಾರಿ ಹೊಟೇಲ್‌ ಗಳಲ್ಲಿ ಒಂದು ಅಂತ ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಇಲ್ಲಿ ಥಾಲಿ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಮಾಹಿತಿ ಪ್ರಕಾರ, ಒಂದು ಪ್ಲೇಟ್‌ ಬೆಲೆ 4 ಸಾವಿರ ರೂಪಾಯಿ. ನೀವು ಥಾಲಿಗೆ ವಿಶೇಷ ಖಾದ್ಯ ಸೇರಿಸಿದಂತೆ ಅದ್ರ ಬೆಲೆ ಹೆಚ್ಚಾಗುತ್ತದೆ. ಒಂದು ಪ್ಲೇಟ್‌ ಬೆಲೆ 12 ಸಾವಿರ ರೂಪಾಯಿವರೆಗೂ ಹೋಗೋದಿದೆ. ಇಲ್ಲಿ ನಡೆಯುವ ಮದುವೆ ವೆಚ್ಚ ಒಂದು ಕೋಟಿಗೂ ಮೀರಿದ್ದು.

ಒಂದು ರಾತ್ರಿ ತಂಗಲು ಇಷ್ಟು ಹಣ ನೀಡ್ಬೇಕು : ಇಲ್ಲಿನ ರೂಮ್‌ ಗಳ ಬೆಲೆ ಕೂಡ ದುಬಾರಿ. ಈ ಹೊಟೇಲ್‌ 65 ಕೊಠಡಿಗಳನ್ನು ಮತ್ತು 18 ಗ್ರ್ಯಾಂಡ್ ಸೂಟ್ ಕೊಠಡಿಗಳನ್ನು ಹೊಂದಿದೆ. ಈ ಅರಮನೆಯಲ್ಲಿ ಇಬ್ಬರಿಗೆ ಒಂದು ರಾತ್ರಿ ತಂಗುವ ವೆಚ್ಚ ಸರಿಸುಮಾರು 1,43,500 ರೂಪಾಯಿ. ಸೂಟ್‌ ರೂಮ್‌ ಬೆಲೆ ಹೆಚ್ಚಿದೆ.  ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‌ನ ಬಾಡಿಗೆ 10,50,000 ರೂಪಾಯಿ. ತಾಜ್ ಲೇಕ್ ಪ್ಯಾಲೇಸ್ ನಲ್ಲಿ ಮದುವೆ ಅಲಂಕಾರಕ್ಕೆ 30ರಿಂದ 35 ಲಕ್ಷ ರೂಪಾಯಿ ಚಾರ್ಜ್‌ ಮಾಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read