ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಹೊಸ ಗೆಳತಿ ಗೌರಿ ಸ್ಪ್ರ್ಯಾಟ್ ಅವರನ್ನು ಪರಿಚಯಿಸಿ ಸುದ್ದಿಯಾಗಿದ್ದಾರೆ. 18 ತಿಂಗಳಿಂದ ಗೌರಿ ಜೊತೆ ಸಂಬಂಧದಲ್ಲಿದ್ದು, 25 ವರ್ಷಗಳಿಂದ ಪರಿಚಿತರಾಗಿದ್ದೇವೆ ಎಂದು ಅಮೀರ್ ಖಾನ್ ಹೇಳಿದ್ದು, ಪತ್ರಿಕಾಗೋಷ್ಠಿಯಲ್ಲಿ ಗೌರಿಯನ್ನು ಜಗತ್ತಿಗೆ ಪರಿಚಯಿಸಿದರು.
ಇದಾದ ನಂತರ ಅಮೀರ್ ಖಾನ್ ಮತ್ತು ಮಗಳು ಇರಾ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಪ್ಪನ ಹೊಸ ಗೆಳತಿಯನ್ನು ಕಂಡ ಇರಾ ಗಂಭೀರವಾಗಿದ್ದರು. ಅಮೀರ್ ಖಾನ್ ಏನೋ ಸಮಜಾಯಿಷಿ ಕೊಡಲು ಪ್ರಯತ್ನಿಸುತ್ತಿದ್ದರು. ಇದೇ ವೇಳೆ ಇರಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ? ನಾನು – ಏನೂ ಇಲ್ಲ……” ಎಂದು ಬರೆದುಕೊಂಡಿದ್ದಾರೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಗೌರಿ ಸ್ಪ್ರ್ಯಾಟ್ ಬೆಂಗಳೂರಿನವರು. ಅವರು ಮುಂಬೈಯಲ್ಲಿ ಬಿಬ್ಲಂಟ್ ಸಲೋನ್ ನಡೆಸುತ್ತಿದ್ದಾರೆ. ಅಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಅಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ 25 ವರ್ಷಗಳ ಸ್ನೇಹವು 18 ತಿಂಗಳ ಹಿಂದೆ ಪ್ರೇಮವಾಗಿ ಬದಲಾಯಿತು ಎಂದು ಅಮೀರ್ ಖಾನ್ ಹೇಳಿದ್ದಾರೆ.
ಅಮೀರ್ ಖಾನ್ ಅವರ ಈ ಹೊಸ ಸಂಬಂಧದ ಬಗ್ಗೆ ಇರಾ ಖಾನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಮೀರ್ ಖಾನ್ ಮತ್ತು ಇರಾ ಖಾನ್ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಅನುಮಾನಗಳು ಮೂಡುತ್ತಿವೆ.