ಎಚ್ಚರ….! ಹೀಗೂ ನಡೆಯುತ್ತೆ ONLINE ವಂಚನೆ

ಆನ್ಲೈನ್‌ ವಂಚಕರು ಮತ್ತಷ್ಟು ಬುದ್ಧಿವಂತರಾಗಿದ್ದಾರೆ. ಆನ್ಲೈನ್‌ ನಲ್ಲಿ ಮೋಸ ನಡೆಯುವ ಕಾರಣ, ಒಟಿಪಿ, ಫೋನ್‌ ಕರೆ ಸ್ವೀಕರಿಸಬೇಡಿ ಅಂತಾ ಜನರನ್ನು ಜಾಗೃತಗೊಳಿಸುವ ಅಭಿಯಾನ ನಡೆಯುತ್ತಿದೆ. ಆದ್ರೆ ವಂಚಕರು ಇನ್ನೊಂದು ಕೈ ಮುಂದೆ ಹೋಗಿ, ಫೋನ್‌ ಕಾಲ್‌, ಒಟಿಪಿ ಇಲ್ಲದೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ ಮಾಡ್ತಿದ್ದಾರೆ.

ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್‌ ಖಾತೆಯನ್ನು, ಒಟಿಪಿ, ಫೋನ್‌ ಕರೆ ಅಥವಾ ಇನ್ನಾವುದೇ ಮಾತುಕತೆ ಇಲ್ಲದೆ ಖಾಲಿ ಮಾಡಲಾಗಿದೆ. ಆರೋಪಿಗಳು ಮೊದಲು ಸರ್ಕಾರಿ ಡೇಟಾವನ್ನು ತೆಗೆದಿದ್ದಾರೆ. ಅಲ್ಲಿ ಪೀಡಿತನ ಆಸ್ತಿ ವಿವರವನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿ ಆಧಾರ್‌ ಮಾಹಿತಿ ಹಾಗೂ ಪೀಡಿತನ ಫಿಂಗರ್‌ ಪ್ರಿಂಟ್ ಕದಿಯಲಾಗಿದೆ. ನಂತ್ರ ಆರೋಪಿಗಳು ನಕಲಿ ಥಮ್‌ ಇಂಪ್ರೆಶನ್‌ ಕ್ರಿಯೆಟ್‌ ಮಾಡಿದ್ದಾರೆ. ನಂತ್ರ ಆಧಾರ್‌ ಡಿಟೇಲ್‌ ಹಾಗೂ ಥಮ್‌ ಇಂಪ್ರೆಶನ್‌ ನೀಡಿ, ಬ್ಯಾಂಕ್‌ ಖಾತೆಯಿಂದ ಹಣ ವಿತ್‌ ಡ್ರಾ ಮಾಡಿದ್ದಾರೆ. ಆರೋಪಿಗಳು ಅರಿವಿಗೆ ಬರದಂತೆ ಈ ಕೃತ್ಯ ಎಸಗುತ್ತಿದ್ದಾರೆಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (AePS) ಅನನ್ಯ ಗುರುತಿನ ಸಂಖ್ಯೆಯನ್ನು ಆಧರಿಸಿದ ಪಾವತಿ ಸೇವೆಯಾಗಿದೆ. ಇದು ಆಧಾರ್ ಕಾರ್ಡ್ ಅನ್ನು ನಿಮ್ಮ ಗುರುತಾಗಿ ಬಳಸಲು ನಿಮಗೆ ಅಧಿಕಾರ ನೀಡುತ್ತದೆ. ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಲ್ಲಿ ಈ ವಿಧಾನದ ಮೂಲಕ ನೀವು ಹಣಕಾಸಿನ ವಹಿವಾಟು ನಡೆಸಬಹುದು. ಈ ವಿಧಾನ ಬಳಸದಂತೆ ಪೊಲೀಸರು ಮಾಹಿತಿ ನೀಡಿದ್ದಾರೆ. ಯುಐಡಿಎಐ ವೆಬ್‌ ಸೈಟ್‌ ನಿಂದಲೇ ಆಧಾರ್‌ ಡೌನ್ಲೋಡ್‌ ಮಾಡಿ. ಹಾಗೆಯೇ ನಿಮ್ಮ ಇಮೇಲ್‌ ಹಾಗೂ ಫೋನ್‌ ನಂಬರ್‌ ಲಿಂಕ್‌ ಮಾಡಿ. ಆಗ ಆಧಾರ್‌ ಮೂಲಕ ಯಾವುದೇ ಮೋಸ ನಡೆದ್ರೂ ತಕ್ಷಣ ನಿಮಗೆ ಮಾಹಿತಿ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read