VIRAL VIDEO : ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿ ರೀಲ್ಸ್ ಮಾಡಿದ್ದ ಯುವತಿ ಅರೆಸ್ಟ್..!

ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿ ರೀಲ್ಸ್ ಮಾಡಿ ಭಾರಿ ಟೀಕೆಗೊಳಗಾಗಿದ್ದ ಯುವತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ಹುಚ್ಚು ಸಾಹಸ ಮಾಡಿದ್ದ ಯುವತಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಭಾರಿ ಆಗ್ರಹಗಳು ಕೇಳಿಬಂದಿತ್ತು, ಈ ಹಿನ್ನೆಲೆ ಪೊಲೀಸರು ಯುವತಿ ಹಾಗೂ ಸ್ನೇಹಿತನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಪಾಳು ಬಿದ್ದ ಕಟ್ಟಡದ ಟೆರೇಸ್ ಮೇಲೆ ಯುವಕನೊಬ್ಬ ಕಟ್ಟಡದ ತುದಿಯಲ್ಲಿ ಮಲಗಿದ್ದು ತನ್ನ ಕೈಯನ್ನು ಕೆಳಗೆ ನೀಡಿದ್ದು ಅದನ್ನು ಯುವತಿಯೊಬ್ಬಳು ಹಿಡಿದು ನೇತಾಡುತ್ತಿದ್ದಾಳೆ. ತಮ್ಮ ತೋಳುಗಳ ಬಲವನ್ನು ಪರೀಕ್ಷಿಸಲು ಮತ್ತು ರೀಲ್ಸ್ ಕಂಟೆಂಟ್ ರಚಿಸಲು ಈ ರೀತಿ ಪ್ರಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.ಪುಣೆಯ ಜಂಭುಲ್ವಾಡಿ ಪ್ರದೇಶದ ಸ್ವಾಮಿನಾರಾಯಣ ಮಂದಿರದ ಬಳಿಯ ಕಟ್ಟಡದ ಮೇಲೆ ಈ ಸಾಹಸವನ್ನು ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗಂತೂ ತ್ವರಿತವಾಗಿ ಖ್ಯಾತಿ ಗಳಿಸಲು ಮತ್ತು ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಇಂಟರ್ನೆಟ್ ಬಳಕೆದಾರರು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುತ್ತಿರುತ್ತಾರೆ.

https://twitter.com/i/status/1803647902327382127

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read