ಕಪ್ಪಗಿದ್ದಾಳೆಂಬ ಕಾರಣಕ್ಕೆ ತನ್ನನ್ನು ತಿರಸ್ಕರಿಸಿದ್ದವನ ಜೀವ ಕಾಪಾಡಿದ ಯುವತಿ ; ʼಮಾನವೀಯತೆʼ ಗೆ ಇಲ್ಲಿದೆ ಸಾಕ್ಷಿ

ಕಪ್ಪಗಿನ ಬಣ್ಣದ ಕಾರಣಕ್ಕೆ ಮದುವೆಯನ್ನು ಮುರಿದ ಯುವಕನಿಗೆ ಶ್ವೇತಾ ಎಂಬಾಕೆ ತನ್ನ ಮಾನವೀಯತೆಯಿಂದ ಉತ್ತರ ನೀಡಿದ್ದಾಳೆ.

ಶ್ವೇತಾಳ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ದಿನ ಕಪ್ಪಗಿನ ಬಣ್ಣದ ಕಾರಣಕ್ಕೆ ಆಕೆಯನ್ನು ಭಾವಿ ಪತಿ ತ್ಯಜಿಸಿದ್ದ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋದ ಶ್ವೇತಾ ಮತ್ತು ಆಕೆಯ ತಂದೆ, ಊರನ್ನು ತೊರೆದು ಬೇರೆಡೆ ನೆಲೆಸಿದ್ದರು.

ದಿನಗಳು ಉರುಳಿದವು. ಒಂದು ದಿನ ಯುವಕ ನದಿಯಲ್ಲಿ ಮುಳುಗುತ್ತಿದ್ದಾಗ ಶ್ವೇತಾ ಮತ್ತು ಆಕೆಯ ತಂದೆ ಅವನನ್ನು ರಕ್ಷಿಸಿದ್ದಾರೆ. ಅಚ್ಚರಿ ಎಂದರೆ, ಆ ಯುವಕ ಬೇರೆ ಯಾರೂ ಅಲ್ಲ, ಶ್ವೇತಳನ್ನು ಮದುವೆಯಾಗಲು ನಿರಾಕರಿಸಿದವನೇ ಆಗಿದ್ದ !

ಶ್ವೇತಾ ತನ್ನ ವೈಯಕ್ತಿಕ ನೋವನ್ನು ಬದಿಗಿಟ್ಟು ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾಳೆ. ಈ ಮೂಲಕ ಮಾನವೀಯತೆಯ ಮಹತ್ವವನ್ನು ಜಗತ್ತಿಗೆ ಸಾರಿದ್ದಾಳೆ.

ಈ ಘಟನೆ ಯುವಕನ ಕಣ್ಣು ತೆರೆಸಿದ್ದು, ತನ್ನ ತಪ್ಪಿನ ಅರಿವಾಗಿದೆ. ಶ್ವೇತಾಳ ಬಳಿ ಕ್ಷಮೆಯಾಚಿಸಿದ್ದು, ಶ್ವೇತಾ ಕೂಡಾ ತನ್ನ ಹಳೆಯ ನೋವನ್ನು ಮರೆತು ಯುವಕನನ್ನು ಕ್ಷಮಿಸಿದ್ದಾಳೆ.

ಈ ಕಥೆ ಪ್ರೀತಿ, ಕ್ಷಮೆ ಮತ್ತು ಮಾನವೀಯತೆಯ ಮಹತ್ವವನ್ನು ಸಾರುತ್ತದೆ. ವರ್ಣಭೇದದಂತಹ ಸಮಾಜದ ಪಿಡುಗುಗಳನ್ನು ತೊಡೆದುಹಾಕಲು ಇಂತಹ ಘಟನೆಗಳು ಪ್ರೇರಣೆ ನೀಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read