ಬೆಂಗಳೂರು : ಮದುವೆಯಾಗು ಎಂದು ಪೀಡಿಸಿ ಪಾಗಲ್ ಪ್ರೇಮಿಯೋರ್ವ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದು, ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗದಲ್ಲಿ ಈ ಘಟನೆ ನಡೆದಿದೆ.
ಚಿಕ್ಕಮ್ಮನ ಮನೆಯಲ್ಲಿ ನೇಣು ಬಿಗಿದುಕೊಂಡು ಭಾವನಾ (22) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಗಾಗಲೇ ನವೀನ್ ಗೆ ಮದುವೆ ಆಗಿದ್ದರೂ ಮದುವೆ ಆಗುವಂತೆ ಭಾವನಾಗೆ ನವೀನ್ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಭಾವನಾ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗ್ಯಾರಹಳ್ಳಿ ನಿವಾಸಿಯಾಗಿದ್ದಾಳೆ.
ಭಾವನಾ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ನವೀನ್ ಗೆ ತಂದೆ ಮಗಳ ಮೊಬೈಲ್ ನಂಬರ್ ನೀಡಿ ಗೂಗಲ್ ಫೇ ಮೂಲಕ ಹಣ ಕಳುಹಿಸುತ್ತಿದ್ದರು. ಈ ಮೂಲಕ ನಂಬರ್ ಸೇವ್ ಮಾಡಿಕೊಂಡಿದ್ದ ನವೀನ್ ಭಾವನಾ ಜೊತೆ ಸ್ನೇಹ ಸಂಪಾದಿಸಿದ್ದನು. ಅಲ್ಲದೇ ಆಕೆಯನ್ನು ಧರ್ಮಸ್ಥಳಕ್ಕೆ ಕೂಡ ಕರೆದುಕೊಂಡು ಹೋಗಿ ಫೋಟೋ ತೆಗೆಸಿಕೊಂಡಿದ್ದನು. ಈ ಫೋಟೋ ಇಟ್ಟುಕೊಂಡು ನವೀನ್ ಕಿರುಕು ಳ ನೀಡಿದ್ದಾನೆ. ಇದರಿಂದ ಮನನೊಂದ ಭಾವನಾ ಚಿಕ್ಕಮ್ಮನ ಮನೆಗೆ ಹೋಗಿದ್ದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.