ಬೆಂಗಳೂರು: ಪ್ರೀತಿ ವಿಚಾರಕ್ಕೆ ಗಲಾಟೆಯಾಗಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ತಿಲಕ್ ನಗರದಲ್ಲಿ ನಡೆದಿದೆ.
ಚಾಕುವಿನಿಂದ ಹಿರಿದು ಕಿರಣ್(19) ಕೊಲೆ ಮಾಡಲಾಗಿದೆ. ಯುವತಿಯ ವಿಚಾರಕ್ಕೆ ಗಲಾಟೆಯಾಗಿ ಜೀವನ್ ಎಂಬಾತ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಯುವತಿ ಮತ್ತು ಕಿರಣ್ ಕೆಲವು ತಿಂಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು / ಇತ್ತೀಚೆಗೆ ಅವರಿಬ್ಬರು ಬೇರೆಯಾಗಿದ್ದು. ಯುವತಿ ಆರೋಪಿ ಜೀವನ್ ಜೊತೆಗೆ ಓಡಾಡುತ್ತಿದ್ದಳು/ ಈ ವಿಚಾರ ತಿಳಿದ ಕಿರಣ್ ಯುವತಿಗೆ ಕರೆ ಮಾಡಿ ಭೇಟಿಯಾಗುವಂತೆ ತಿಳಿಸಿದ್ದಾನೆ. ಜೀವನ್ ಜೊತೆಗೆ ಯುವತಿ ಬಂದಿದ್ದು, ಮೂವರ ನಡುವೆ ಗಲಾಟೆಯಾಗಿದೆ. ಗಲಾಟೆಯ ವೇಳೆ ಕಿರಣ್ ಎದೆಗೆ ಚಾಕುವಿನಿಂದ ಇರಿದು ಜೀವನ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಯುವತಿ ಮತ್ತು ಜೀವನ್ ಇಬ್ಬರನ್ನು ಬಂಧಿಸಲಾಗಿದೆ.