ಬಾಗ್ಪತ್ : ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ನಿವಾಡಾ ಗ್ರಾಮದ 19 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನ ಜೊತೆ 500 ರೂ. ಬೆಟ್ಸ್ ಕಟ್ಟಿ ನೀರಿಗೆ ಹಾರಿದ ನಂತರ ಯಮುನಾ ನದಿಯ ಬಲವಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.
ಭಾರೀ ಮಳೆ ಹಿನ್ನೆಲೆ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಪಾಯವನ್ನು ಲೆಕ್ಕಿಸದೇ ಯುವಕ ಜುನೈದ್ ಎಂಬಾತ ನೀರಿಗೆ ಜಿಗಿದಿದ್ದಾನೆ. ಆತನ ಸ್ನೇಹಿತ ಈ ದೃಶ್ಯವನ್ನ ಸೆರೆ ಹಿಡಿದಿದ್ದಾನೆ.ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದೆ. ನಿರಂತರ ಶೋಧ ಕಾರ್ಯಾಚರಣೆಯ ಹೊರತಾಗಿಯೂ ಜುನೈದ್ ಎಂದು ಗುರುತಿಸಲಾದ ಯುವಕ ಪತ್ತೆಯಾಗಿಲ್ಲ.
ಸ್ನೇಹಿತನ ಜೊತೆ ಬೆಟ್ಸ್ ಕಟ್ಟಿ ಸ್ನೇಹಿತನಮ ಸವಾಲನ್ನು ಸ್ವೀಕರಿಸಿ ನದಿಗೆ ಹಾರಿದ ಯುವಕ ಕೆಲಹೊತ್ತು ಈಜಿ ನಂತರ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ.
ಬಾಗ್ಪತ್ ಪೊಲೀಸರು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ನಿರಂತರ ಮಳೆ ಮತ್ತು ಹಥಿನಿಕುಂಡ್ ಬ್ಯಾರೇಜ್ನಿಂದ ನೀರನ್ನು ಬಿಡುಗಡೆ ಮಾಡುವುದರಿಂದ ನದಿಯ ನೀರು ಅಪಾಯದ ಮಟ್ಟಕ್ಕಿಂತ ಮೇಲಕ್ಕೆ ಏರಿದೆ, ಇದು ರಕ್ಷಣಾ ಪ್ರಯತ್ನಗಳಿಗೆ ತೀವ್ರ ಅಡ್ಡಿಯಾಗಿದೆ. ಈವರೆಗೆ, ಯುವಕನ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಬೆಟ್ಟಿಂಗ್ ಮತ್ತು ಘಟನೆಯ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. “ಈ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
सिर्फ 500₹ की शर्त में हार गया जिंदगी.. दोस्त बनाते रहे वीडियो… चिल्लाते रहे हार गया.. हार गया? और वह ज़िन्दगी की जंग में हुआ पराजित
— TRUE STORY (@TrueStoryUP) September 3, 2025
UP क़े जिला बागपत में यमुना नदी क़े निवाड़ा पुल पर एक दिल दहला देने वाली घटना सामने आई है। जुनैद नामक युवक ने महज़ 500 रुपये की शर्त में अपनी… pic.twitter.com/IqvnnZEW2v