ಬೆಂಗಳೂರು: ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಖ್ಯಾತಿಯ ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಚಿತ್ರೀಕರಣ ವೇಳೆ ಅದೃಷ್ಟವಶಾತ್ ದುರಂತವೊಂದು ತಪ್ಪಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುವಾಗ ಘಟನೆ ನಡೆದಿದೆ. ರೋಪ್ ಕಟ್ಟಿ ಎಳೆಯುವಾಗ ಹಗ್ಗದ ಮೇಲಿಂದ ಬಿದ್ದು ನಾಯಕಿ ಸಾತ್ವಿಕ ಗಾಯಗೊಂಡಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿಯಾಗಿರುವ ಸಾತ್ವಿಕ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ‘ಮೋಡ ಕವಿದ ವಾತಾವರಣ’ ನಾಯಕ ಶೀಲಮ್ ಜೊತೆಗೆ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಹಗ್ಗದ ಮೇಲೆ ನೇತಾಡುವ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಅದೃಷ್ಟವಶಾತ್ ಸಾತ್ವಿಕ ಅಪಾಯದಿಂದ ಪಾರಾಗಿದ್ದಾರೆ.