ಹಳಿ ದಾಟುವಾಗ ದಿಢೀರ್ ಬಂದ ರೈಲು; ಮಧ್ಯ ಮಲಗಿ ಪವಾಡಸದೃಶ ರೀತಿಯಲ್ಲಿ ಶಿಕ್ಷಕ ಪಾರು….!

ಶಿಕ್ಷಕರೊಬ್ಬರು ರೈಲ್ವೆ ಹಳಿ ದಾಟುವ ಸಂದರ್ಭದಲ್ಲಿ ದಿಢೀರ್ ಆಗಿ ಗೂಡ್ಸ್ ರೈಲು ಬಂದಿದ್ದು, ಈ ವೇಳೆ ಸಮಯ ಪ್ರಜ್ಞೆ ಮೆರೆದ ಅವರು ಹಳಿಗಳ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಬಿ. ದುರ್ಗ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ದಾವಣಗೆರೆ ನಗರ ರೈಲ್ವೆ ನಿಲ್ದಾಣದಿಂದ ಇಂಟರ್ ಸಿಟಿ ರೈಲಿಗೆ ಹೊರಡಲು ಮುಂದಾಗಿದ್ದು, ಒಂದನೇ ಪ್ಲಾಟ್ಫಾರ್ಮ್ ನಿಂದ ಎರಡನೇ ಫ್ಲಾಟ್ ಫಾರ್ಮ್ ಗೆ ಹೋಗುವಾಗ ಎಡವಿ ಹಳಿ ಮೇಲೆ ಬಿದ್ದಿದ್ದಾರೆ.

ಇದೇ ಸಂದರ್ಭದಲ್ಲಿ ಗೂಡ್ಸ್ ರೈಲು ಬಂದಿದ್ದು, ಆಗ ಸಮಯ ಪ್ರಜ್ಞೆ ಮೆರೆದ ಶಿಕ್ಷಕ ಶಿವಕುಮಾರ್ ಹಳಿಗಳ ಮಧ್ಯೆ ಮಲಗಿದ್ದಾರೆ. ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಗೂಡ್ಸ್ ರೈಲು ನಿಲ್ಲಿಸಿದ್ದು ಬಳಿಕ ಶಿವಕುಮಾರ್ ಅವರನ್ನು ಹಳಿಗಳಿಂದ ಮೇಲೆತ್ತಲಾಗಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read