ಏರ್ ಪೋರ್ಟ್ ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಯಾಣಿಕನಿಗೆ ‘CPR’ ನೀಡಿ ಪ್ರಾಣ ಉಳಿಸಿದ ಯೋಧ : ವಿಡಿಯೋ ವೈರಲ್

ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಯಾಣಿಕನಿಗೆ ಯೋಧರೊಬ್ಬರು ಸಿಪಿಆರ್ ನೀಡಿ ಪ್ರಾಣ ಉಳಿಸಿದ ವಿಡಿಯೋ ವೈರಲ್ ಆಗಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತಂಡವು ತ್ವರಿತ ಪ್ರತಿಕ್ರಿಯೆಯಿಂದ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಜೀವವನ್ನು ಉಳಿಸಿದೆ. ಬೆಳಿಗ್ಗೆ 10:50 ಕ್ಕೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ.

ಟರ್ಮಿನಲ್ 2 ರಿಂದ ಶ್ರೀನಗರಕ್ಕೆ ವಿಮಾನ ಹತ್ತಲು ಸಿದ್ಧರಾಗಿದ್ದ ಅರ್ಷಿದ್ ಅಯೂಬ್ ಹೃದಯ ಸ್ತಂಭನ ಮತ್ತು ತೀವ್ರ ಎದೆ ನೋವಿನಿಂದಾಗಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಸಿಐಎಸ್ಎಫ್ ತಂಡವು ತಕ್ಷಣವೇ ಕಾರ್ಯನಿರ್ವಹಿಸಿ, ಸಿಪಿಆರ್ ನೀಡಿ ಪ್ರಾಣ ಉಳಿಸಿದೆ.

https://twitter.com/i/status/1826528602751734184

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read