BREAKING NEWS : ವಿಧಾನಸೌಧದ ಪತ್ರಗಾರ ಇಲಾಖೆ ಕೊಠಡಿಯಲ್ಲಿ ಕೆರೆಹಾವು ಪತ್ತೆ

ಬೆಂಗಳೂರು : ವಿಧಾನಸೌಧದ ಪತ್ರಗಾರ ಇಲಾಖೆ ಕೊಠಡಿಯಲ್ಲಿ ಕೆರೆಹಾವು ಪತ್ತೆಯಾಗಿದ್ದು, ನಂತರ ಉರಗ ತಜ್ಞರನ್ನು ಕರೆಯಿಸಿ ಹಾವನ್ನು ಹಿಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹತ್ವದ ದಾಖಲೆಗಳಿರುವ ವಿಧಾನಸೌಧದ ಪತ್ರಗಾರ ಇಲಾಖೆಯ ಕಚೇರಿಯಲ್ಲಿ ಕೆರೆಹಾವು ಪತ್ತೆಯಾಗಿದೆ. ಇದರಿಂದ ಸಿಬ್ಬಂದಿಗಳು ಆತಂಕಗೊಂಡಿದ್ದು, ಕೂಡಲೇ ಸಿಬ್ಬಂದಿಗಳು ಉರಗ ತಜ್ಞರನ್ನು ಕರೆಯಿಸಿ ಹಾವನ್ನು ಹಿಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆಯ ಬೆಳವಣಿಗೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ : ಮಾಜಿ ಸಿಎಂ HDK ಕಿಡಿ

ಬೆಂಗಳೂರು : ವಿಧಾನಸಭೆಯಲ್ಲಿ ನಿನ್ನೆ ನಡೆದ ಬೆಳವಣಿಗೆಗೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಐಎಎಸ್ ಅಧಿಕಾರಿಗಳ ದುರುಪಯೋಗ ಬಗ್ಗೆ ನಿನ್ನೆ ಸದನದಲ್ಲಿ ಬಿಜೆಪಿ ಸದಸ್ಯರು ಪ್ರಸ್ತಾಪ ಮಾಡಿದ್ದರು. ಆಡಳಿತ ಪಕ್ಷದವರು ತಪ್ಪೆ ಮಾಡಿಲ್ಲ ಎಂದು ಉದ್ಧಟತನ ತೋರಿದ್ರು ಎಂದು ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ವಿಧಾನಸಭೆಯಲ್ಲಿ ಶಾಸಕರು ಆ ರೀತಿಯಲ್ಲಿ ವರ್ತನೆ ಮಾಡಿದ್ದಕ್ಕೆ ಆಡಳಿತ ಪಕ್ಷದ ನಡವಳಿಕೆಯೇ ಕಾರಣ ಎಂದು ಕಿಡಿಕಾರಿದರು.

ಮೈತ್ರಿಕೂಟ ರಚನೆ ಸಭೆಗೆ ಬಂದಿದ್ದ ರಾಜಕೀಯ ವ್ಯಕ್ತಿಗಳ ಅತಿಥ್ಯಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ ಕ್ರಮಕ್ಕೆ ಬಿಜೆಪಿ ನಿನ್ನೆ ವಿಧಾನಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read