ಶಿವಮೊಗ್ಗ: ಮನೆಯ ಚಪ್ಪಲಿ ಸ್ಟ್ಯಾಂಡ್ ಬಳಿ ಬಿಡಲಾಗಿದ್ದ ಶೂ ಒಳಗೆ ಹಾವೊಂದು ಅಡಗಿಕೊಂಡಿದ್ದ ಘಟನೆ ಶಿವಮೊಗ್ಗದ ವಿದ್ಯಾನಗರ ಕಂಟ್ರಿಕ್ಲಬ್ ರಸ್ತೆಯ ಮನೆಯೊಂದರ ಬಳಿ ನಡೆದಿದೆ.
ವೆಂಕಟೇಶ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಮನೆ ಹೊರಾಂಗಣದಲ್ಲಿದ್ದ ಚಪ್ಪಲಿ ಸ್ಟ್ಯಾಂಡ್ ಬಳಿ ಬಿಡಲಾಗಿದ್ದ ಶೂವೊಂದರ ಒಳಗೆ ‘ಕ್ಯಾಟ್ ಸ್ನೇಕ್’ ವರ್ಗದ ಹಾವು ಸೇರಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕಿರಣ್ ಸುರಕ್ಷಿತವಾಗಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.