VIDEO : ‘ಶಾಲೆಗೆ ಹೋದ ಹೆಣ್ಣು ಮಗಳು ವೇಶ್ಯೆಯಾಗುತ್ತಾಳೆ’ : ವಿವಾದ ಸೃಷ್ಟಿಸಿದ ಪಾಕಿಸ್ತಾನದ ಯೂಟ್ಯೂಬರ್ ಹಾಡು..!

ಹಸನ್ ಇಕ್ಬಾಲ್ ಚಿಸ್ತಿ ಎಂಬ ಪಾಕಿಸ್ತಾನಿ ಯೂಟ್ಯೂಬರ್ ಹೆಣ್ಣು ಶಿಕ್ಷಣವನ್ನು ಖಂಡಿಸಿ ಹಾಡನ್ನು ಬಿಡುಗಡೆ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ತನ್ನ ವೀಡಿಯೊದಲ್ಲಿ, ಗಾಯಕ ತಮ್ಮ ಹೆಣ್ಣುಮಕ್ಕಳನ್ನು ಶಾಲೆಯಿಂದ ಬಿಡಿಸುವಂತೆ ಕೇಳಿಕೊಂಡಿದ್ದಾನೆ, ಹೆಣ್ಣು ಮಕ್ಕಳ ಶಿಕ್ಷಣವನ್ನು ಇಸ್ಲಾಂ ಸ್ವೀಕರಿಸಲ್ಲ ಎಂದು ಹೇಳಿರುವ ಹಾಡಿಗೆ ಆತ ನೃತ್ಯ ಮಾಡಿದ್ದಾನೆ.
ಜನರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಯಿಂದ ಬಿಡಿಸಿ ಮನೆಗಳಲ್ಲಿ ಇರಿಸಿಕೊಳ್ಳಿ, ಇಲ್ಲದಿದ್ದರೆ ಅವರು ವೇಶ್ಯೆಯರಾಗುತ್ತಾರೆ ಎಂದು ಯೂಟ್ಯೂಬರ್ ಹೇಳಿದ್ದಾನೆ. ಈತನ ಸಾಹಿತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಶಿಕ್ಷಣದ ನೆಪದಲ್ಲಿ ವ್ಯಭಿಚಾರದಲ್ಲಿ ತೊಡಗಲು ಇಸ್ಲಾಂ ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಮತ್ತು ಮಹಿಳಾ ಶಿಕ್ಷಣವನ್ನು ನಿಷೇಧಿಸುವುದು ಪ್ರವಾದಿಯ ಆದೇಶಕ್ಕೆ ಅನುಗುಣವಾಗಿದೆ ಮತ್ತು ಮಹಿಳೆ ಮಕ್ಕಳನ್ನು ಹೆರಲು ಮತ್ತು ತನ್ನ ಪುರುಷನ ಸೇವೆ ಮಾಡಲು ಬದ್ಧಳಾಗಿದ್ದಾಳೆ, ಶಿಕ್ಷಣ ಪಡೆಯಲು ಅಲ್ಲ ಆತ ಹೇಳಿದ್ದಾನೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read