ಸಿಂಹ- ಚಿರತೆ ಕಾದಾಟ: ಕೊನೆಗೆ ಗೆಲ್ಲುವವರು ಯಾರು……? ಕುತೂಹಲದ ವಿಡಿಯೋ ವೈರಲ್​

ಪ್ರಾಣಿಗಳ ವೀಡಿಯೊಗಳು, ವಿಶೇಷವಾಗಿ ಮಾಂಸಾಹಾರಿ ಪ್ರಾಣಿಗಳ ಬೇಟೆಯ ವಿಡಿಯೋಗಳು ಬಹಳ ಕುತೂಹಲಕಾರಿಯಾಗಿರುತ್ತದೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಲು ಅತ್ಯಂತ ಆಕರ್ಷಕವಾಗಿವೆ. ಈ ವೀಡಿಯೊಗಳು ಒಂದೇ ಸಮಯದಲ್ಲಿ ಮನರಂಜನೆ ಜೊತೆಗೆ ಹಲವು ವಿಷಯಗಳನ್ನೂ ತಿಳಿಸುತ್ತವೆ.
ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಚಿರತೆ ಮತ್ತು ಸಿಂಹಿಣಿ ಜಗಳದಲ್ಲಿ ಗೆಲ್ಲುವವರು ಯಾರು ಎನ್ನುವುದು ಈ ವಿಡಿಯೋದ ಕುತೂಹಲ.

ಸಾಮಾನ್ಯವಾಗಿ ಸಿಂಹಗಳು ಬಲಿಷ್ಠವಾಗಿರುತ್ತವೆ. ಇವುಗಳ ಕೈಗೆ ಯಾವುದೇ ಪ್ರಾಣಿ ಸಿಕ್ಕರೂ ಅವುಗಳ ಕಥೆ ಮುಗಿದಂತೆಯೇ. ಅದೇ ರೀತಿ ಸಿಂಹ ಮತ್ತು ಚಿರತೆ ಕಾದಾಡುವ ವಿಡಿಯೋ ವೈರಲ್​ ಆಗಿದೆ. ಚಿರತೆಯ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಟ್ವಿಸ್ಟ್​ ಸಿಗುತ್ತದೆ. ಚಿರತೆ ಅಲ್ಲಿಯೇ ಇದ್ದ ಮರವನ್ನು ಸರಸರ ಏರಿ ಹೋದರೆ ಸಿಂಹ ಮಾತ್ರ ಮರ ಹತ್ತಲಾಗದೇ ಅಸಹಾಯಕವಾಗಿ ಕುಳಿತುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ರಾಜನಾಗಿದ್ದರೂ ಕೆಲವು ಸಲ ಸೋಲು ಒಪ್ಪಿಕೊಳ್ಳಲೇಬೇಕಾಗುತ್ತದೆ ಎನ್ನುವುದು ಇದರ ಪಾಠ ಎಂದಿದ್ದಾರೆ ನೆಟ್ಟಿಗರು.

https://youtu.be/SECpV-xZSKQ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read