ನಿಮ್ಮ ಮುಖದ ಅಂದ ದುಪ್ಪಟ್ಟು ಮಾಡುತ್ತೆ ಚಿಟಿಕೆ ಅರಿಶಿನ ಮತ್ತು ಹಾಲು…!

ಅರಿಶಿನ ಕೂಡ ಆಯುರ್ವೇದ ಮೂಲಿಕೆಗಳಲ್ಲೊಂದು. ಅರಿಶಿನದಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಚರ್ಮದ ಆರೈಕೆಗೆ ಅರಿಶಿನವನ್ನು ಬಳಸಲಾಗುತ್ತಿದೆ. ಅರಿಶಿನ ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಸುಂದರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅರಿಶಿನದ ಫೇಸ್‌ ಮಾಸ್ಕ್‌ ಅನ್ನು ರಾತ್ರಿ ಬಳಸಿದ್ರೆ ಅದರ ಪ್ರಯೋಜನ ಡಬಲ್‌ ಆಗುತ್ತದೆ.

ಹಾಲು ಮತ್ತು ಅರಿಶಿನ ಬೆರೆಸಿ ಮಾಡುವ ಫೇಸ್‌ ಮಾಸ್ಕ್‌ ಇದು. ಈ ಮಾಸ್ಕ್‌ ಹಚ್ಚಿಕೊಳ್ಳುವುದರಿಂದ ಮುಖದ ಕಲೆಗಳೆಲ್ಲ ಮಾಯವಾಗಿ ಸುಂದರ ತ್ವಚೆ ನಿಮ್ಮದಾಗುತ್ತದೆ. ಪ್ರತಿಯೊಂದು ಚರ್ಮದ ಸಮಸ್ಯೆಗೂ ಈ ಫೇಸ್‌ಮಾಸ್ಕ್‌ನಲ್ಲಿ ಪರಿಹಾರವಿದೆ. ಅರಿಶಿನದ ನೈಟ್ ಫೇಸ್ ಮಾಸ್ಕ್ ಮಾಡಲು ಅರ್ಧ ಬಟ್ಟಲು ಹಾಲು ಮತ್ತು ಕಾಲು ಟೀ ಚಮಚ ಅರಿಶಿನವನ್ನು ತೆಗೆದುಕೊಳ್ಳಿ. ಒಂದು ಬೌಲ್‌ನಲ್ಲಿ ಸ್ವಲ್ಪ ಹಾಲನ್ನು ಹಾಕಿ ಅದಕ್ಕೆ ಅರಿಶಿನವನ್ನು ಬೆರೆಸಿ. ಮಿಶ್ರಣವನ್ನು ಚೆನ್ನಾಗಿ ಕಲಕಿ ಸಿದ್ಧಪಡಿಸಿಕೊಳ್ಳಿ.

ಫೇಸ್‌ ಮಾಸ್ಕ್‌ ಹಚ್ಚಿಕೊಳ್ಳುವ ಮುನ್ನ ಮುಖವನ್ನು ಸ್ವಚ್ಛಗೊಳಿಸಬೇಕು. ನಂತರ ಹತ್ತಿ ಉಂಡೆಯ ಸಹಾಯದಿಂದ ಈ  ಮಿಶ್ರಣವನ್ನು ನಿಮ್ಮ ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. ಚೆನ್ನಾಗಿ ಒಣಗುವವರೆಗೆ ಅದನ್ನು ಹಾಗೇ ಬಿಡಿ. ಒಣಗಿದ ನಂತರ ಶುದ್ಧವಾದ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಈ ಫೇಸ್‌ಮಾಸ್ಕ್‌ ಅನ್ನು ವಾರಕ್ಕೆ ಕನಿಷ್ಠ 2-3 ಬಾರಿ ಬಳಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read