ದುನಿಯಾ ಡಿಜಿಟಲ್ ಡೆಸ್ಕ್ : ಜಂಕ್ ಫುಡ್ ಪೊಟ್ಟಣದಲ್ಲಿ ಸುಟ್ಟು ಕರಕಲಾದ ಹಾವಿನ ತುಂಡು ಪತ್ತೆಯಾಗಿದೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಯ ಮುಂಡಾಜೆಯ ಸೋಮಂತಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯಲ್ಲಿ ಖರೀದಿಸಿದ ಜಂಕ್ ಫುಡ್ ಪೊಟ್ಟಣದಲ್ಲಿ ಸುಟ್ಟು ಕರಕಲಾದ ಸಣ್ಣ ಹಾವಿನ ರೀತಿಯ ವಸ್ತು ಪತ್ತೆಯಾಗಿದೆ.
ಬಾಲಕಿಯೊಬ್ಬಳು ಅಂಗಡಿಯಿಂದ ಜಂಕ್ ಫುಡ್ ಪ್ಯಾಕೆಟ್ ಖರೀದಿಸಿದ್ದು, ತಿನ್ನುವ ವೇಳೆ ಸಣ್ಣ ಹಾವಿನ ಮಾದರಿಯ ರೀತಿಯ ವಸ್ತು ಪತ್ತೆಯಾಗಿದೆ. ಕೂಡಲೇ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದು, ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗಿದೆ ಹಾಗೂ ಅವರು ಆರೋಗ್ಯವಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
