ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡಲು ಬಂದಿದೆ ಹೊಸ ಬ್ರಿಟಿಷ್‌ ಬೈಕ್‌

BSA ಗೋಲ್ಡ್ ಸ್ಟಾರ್ 650 ಅದ್ಭುತ ವಿನ್ಯಾಸದ ಕ್ಲಾಸಿಕ್ ಬ್ರಿಟಿಷ್ ಬೈಕ್. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿಗೆ ಪೈಪೋಟಿ ಒಡ್ಡಬಲ್ಲ ಎಲ್ಲಾ ವಿಶೇಷತೆಗಳೂ ಈ ಬೈಕ್‌ನಲ್ಲಿವೆ. BSA ಗೋಲ್ಡ್ ಸ್ಟಾರ್ 650 ಪ್ರಬಲವಾದ 650cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದೆ. ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕ ಕಾರ್ಯಕ್ಷಮತೆ ಇದರ ಮತ್ತೊಂದು ವಿಶೇಷತೆ.

ಈ ಬೈಕ್‌ನ ರೆಟ್ರೊ ಮತ್ತು ಕ್ಲಾಸಿಕ್ ವಿನ್ಯಾಸ ವಾಹನ ಪ್ರಿಯರನ್ನ ಆಕರ್ಷಿಸುವಂತಿದೆ. ಇದರಲ್ಲಿ ನೀಡಲಾದ ಉನ್ನತ ಮಟ್ಟದ ಫೀಚರ್‌ಗಳು ಕೂಡ ಲಭ್ಯವಿವೆ. ಕ್ಲಾಸಿಕ್ ಮತ್ತು ವಿಂಟೇಜ್ ಬೈಕ್‌ಗಳನ್ನು ಇಷ್ಟಪಡುವ ಸವಾರರಿಗೆ ಇದರ ಸ್ಟೈಲಿಂಗ್ ಮತ್ತು ಎಂಜಿನ್ ಥಂಪ್ ಖಂಡಿತವಾಗಿಯೂ ಇಷ್ಟವಾಗುತ್ತದೆ.

ರೌಂಡ್ ಹೆಡ್‌ಲೈಟ್‌ಗಳು, ಕ್ರೋಮ್ ಫಿನಿಶ್ ಮತ್ತು ಟಿಯರ್‌ಡ್ರಾಪ್-ಆಕಾರದ ಇಂಧನ ಟ್ಯಾಂಕ್‌ ಬೈಕ್‌ನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಅನಲಾಗ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್, ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್ ಜೊತೆಗೆ ಡಿಜಿಟಲ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಈ ಬೈಕಿನ ಎಂಜಿನ್ ಸುಮಾರು 45 bhp ಪವರ್ ಮತ್ತು 55 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫ್ಯೂಯಲ್ ಇಂಜೆಕ್ಷನ್ ವ್ಯವಸ್ಥೆಯೂ ಇದರಲ್ಲಿರುವುದರಿಂದ ಉತ್ತಮ ಮೈಲೇಜ್‌ ನೀಡಬಲ್ಲದು.

ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಅಳವಡಿಸಲಾಗಿದೆ. ಮಿಶ್ರಲೋಹದ ಚಕ್ರಗಳೊಂದಿಗೆ ಡ್ಯುಯಲ್-ಚಾನೆಲ್ ABS ಬ್ರೇಕಿಂಗ್ ಸಿಸ್ಟಮ್ ಈ ಬೈಕಿನಲ್ಲಿದೆ. ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 255 ಎಂಎಂ ಡಿಸ್ಕ್ ಬ್ರೇಕ್ ಇದೆ. ಇದು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಈ ಬೈಕಿನ ಮೈಲೇಜ್ ಸುಮಾರು 25-30 ಕಿಮೀನಷ್ಟಿರುತ್ತದೆ. ಗರಿಷ್ಠ ವೇಗ ಸುಮಾರು ಗಂಟೆಗೆ 160 ಕಿಮೀ. ಭಾರತದಲ್ಲಿ BSA ಗೋಲ್ಡ್ ಸ್ಟಾರ್ 650 ಬೆಲೆ 2.99 ಲಕ್ಷದಿಂದ ಪ್ರಾರಂಭವಾಗಿ 3.35 ಲಕ್ಷ ರೂಪಾಯಿವರೆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read