ಛತ್ತೀಸ್ಗಢ: ಕಿಡಿಗೇಡಿಯೋರ್ವ ಬೈಕ್’ಗೆ ಬೃಹತ್ ಹೆಬ್ಬಾವನ್ನು ಕಟ್ಟಿ ಕ್ರೂರವಾಗಿ ಎಳೆದೊಯ್ದ ಘಟನೆ ನಡೆದಿದ್ದು, ಆಘಾತಕಾರಿ ವೀಡಿಯೋ ವೈರಲ್ ಆಗಿದೆ.
ಛತ್ತೀಸ್ಗಢದ ಆಘಾತಕಾರಿ ವಿಡಿಯೋವೊಂದು ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ಗೆ ಬೃಹತ್ ಗಾತ್ರದ ಹೆಬ್ಬಾವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಈ ಘಟನೆ ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋದಲ್ಲಿ, ಯುವಕನೊಬ್ಬ ಹಗ್ಗದಿಂದ ಕಟ್ಟಿ ಹಾವನ್ನು ತನ್ನ ಬೈಕ್ನಿಂದ ಎಳೆಯುತ್ತಿರುವುದನ್ನು ಕಾಣಬಹುದು. ಈ ಘಟನೆಯು ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಬ್ಬಾವನ್ನು ಬಲವಂತವಾಗಿ ರಸ್ತೆಯಲ್ಲಿ ಎಳೆಯಲಾಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಯುವಕನೊಬ್ಬ ಹೆಬ್ಬಾವನ್ನು ಬೈಕ್ನ ಹಿಂದೆ ಹಗ್ಗದಿಂದ ಕಟ್ಟಿ ಎಲ್ಲೋ ಎಳೆಯುತ್ತಿದ್ದಾನೆ. ಈ ಘಟನೆಯನ್ನು ನೋಡಿದ ಕೆಲವರು ಭಯಭೀತರಾಗಿದ್ದರು, ಆದರೆ ಹೆಚ್ಚಿನವರು ಇದನ್ನು ಪ್ರಾಣಿಗಳ ಮೇಲಿನ ಕ್ರೌರ್ಯ ಎಂದು ಕರೆದರು. ಈ ವೀಡಿಯೊವನ್ನು ದಾರಿಹೋಕರು ಸೆರೆ ಹಿಡಿದಿದ್ದಾರೆ.ಅರಣ್ಯ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆ ಕಾಡಿನ ಬಳಿ ನಡೆದಿದ್ದು, ಅಲ್ಲಿ ಈ ಹೆಬ್ಬಾವು ಕಾಣಿಸಿಕೊಂಡಿತ್ತು. ಯುವಕ ಹೇಳುವಂತೆ ಹೆಬ್ಬಾವನ್ನು ಹಳ್ಳಿಯಿಂದ ಹೊರಗೆ ತೆಗೆದುಕೊಂಡು ಹೋಗಿ ಯಾರಿಗೂ ಹಾನಿಯಾಗದಂತೆ ಅಲ್ಲಿ ಬಿಡಲು ಬಯಸಿದ್ದೆ ಎಂದಿದ್ದಾನೆ, ಈ ರೀತಿ ಪ್ರಾಣಿಗಳನ್ನು ಎಳೆದುಕೊಂಡು ಹೋಗುವುದು ಕಾನೂನುಬದ್ಧ ಅಪರಾಧ.
वन्य प्राणी पर क्रूरता: युवक ने अजगर को बाइक से घसीटा, कांकेर का वीडियो वायरल #Kanker #viralvideo #cgnews pic.twitter.com/JF79SmhsXd
— INH 24X7 (@inhnewsindia) July 31, 2025