ಬೆಂಗಳೂರು : ಎದೆನೋವು ಎಂದು ಬಂದವನಿಗೆ ಹೃದಯಸ್ತಂಭನವಾಗಿದ್ದು, ಆಸ್ಪತ್ರೆ ಬೆಡ್ ಮೇಲೆಯೇ ಬ್ರೈನ್ ಡೆಡ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಈ ಘಟನೆ ನಡೆದಿದೆ. ಹೊಸಕೋಟೆಯ ಕೋನಪ್ಪ (52) ಬ್ರೈನ್ ಡೆಡ್ ಆದ ವ್ಯಕ್ತಿ.
ಕೋನಪ್ಪ ಎಂಬುವವರು ಎದೆನೋವು ಅಂತ ಸೀದಾ ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ಅವರನ್ನು ಗಮನಿಸಿ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಅಷ್ಟರಲ್ಲೇ ಕೋನಪ್ಪ ಅವರಿಗೆ ಬ್ರೈನ್ ಡೆಡ್ ಆಗಿದೆ ಎನ್ನಲಾಗಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಹೊಸಕೋಟೆಯ ಕೋನಪ್ಪ (52) ಎಂದು ಗುರುತಿಸಲಾಗಿದೆ. ಬ್ರೈನ್ ಡೆಡ್ ಆದ ಬಳಿಕ ಚಿಕಿತ್ಸೆಗಾಗಿ ಬೇರೆ ಕಡೆ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.