ಉತ್ತರ ಪ್ರದೇಶದ ಆಗ್ರಾದಲ್ಲಿ ಕೇವಲ 15,000 ರೂಪಾಯಿ ಮಾಸಿಕ ವೇತನ ಪಡೆಯುವ ಸ್ವಚ್ಛತಾ ಕಾರ್ಮಿಕ ಕರಣ್ ಕುಮಾರ್‌ಗೆ 34 ಕೋಟಿ ರೂಪಾಯಿಗಳ ಆದಾಯ ತೆರಿಗೆ ನೋಟಿಸ್ ಬಂದಿದೆ.
ಈ ಮೊದಲು ಅಲಿಗಢದಲ್ಲಿ ಜ್ಯೂಸ್ ಮಾರುವವನಿಗೆ 7.8 ಕೋಟಿ ರೂಪಾಯಿ ಮತ್ತು ಕಾರ್ಖಾನೆಯ ಕೂಲಿ ಕಾರ್ಮಿಕನೊಬ್ಬನಿಗೆ 11 ಕೋಟಿ ರೂಪಾಯಿಗಳ ಆದಾಯ ತೆರಿಗೆ ನೋಟಿಸ್ ಬಂದಿತ್ತು.
ಮಾರ್ಚ್ 22 ರಂದು ನೀಡಲಾದ ನೋಟಿಸ್‌ನಲ್ಲಿ, ಕರಣ್ ಕುಮಾರ್ ಅವರು 2019-20 ರ ಮೌಲ್ಯಮಾಪನ ವರ್ಷಕ್ಕೆ (AY) ತಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಿಲ್ಲ ಎಂದು ತಿಳಿಸಲಾಗಿದೆ.
ದಾಖಲೆಗಳ ಪ್ರಕಾರ, 2019-20 ನೇ ಸಾಲಿನಲ್ಲಿ ಕರಣ್ ಕುಮಾರ್ ಅವರ ಆದಾಯ 33,85,85,368 ರೂಪಾಯಿ ಎಂದು ನಮೂದಿಸಲಾಗಿದೆ.
ಕರಣ್ ಕುಮಾರ್ ಅವರು ಮಾರ್ಚ್ 29 ರಂದು ಈ ನೋಟಿಸ್ ಪಡೆದಿದ್ದಾರೆ. ಮೊದಲಿಗೆ ಅವರಿಗೆ ನೋಟಿಸ್‌ನಲ್ಲಿರುವುದೇನು ಎಂದು ಅರ್ಥವಾಗಲಿಲ್ಲ. ನಂತರ ಬೇರೆಯವರನ್ನು ಕೇಳಿ ತಿಳಿದುಕೊಂಡಾಗ ಆಘಾತಕ್ಕೆ ಒಳಗಾದರು.