‘ಮಾನಸಿಕ ಒತ್ತಡ’ ಕಡಿಮೆಯಾಗಲು ಸಹಕಾರಿ ಶಾರೀರಿಕ ಸಂಬಂಧ

ಜೀವನಕ್ಕೆ ಆಹಾರ, ನೀರು, ಗಾಳಿ, ನಿದ್ರೆ ಹೇಗೆ ಅಗತ್ಯವೋ ಹಾಗೆ ಆರೋಗ್ಯವಂತ ಜೀವನಕ್ಕೆ ಸೆಕ್ಸ್ ಕೂಡ ಬೇಕು. ಒಂದು ಸಂಶೋಧನೆ ಪ್ರಕಾರ, ವಾರದಲ್ಲಿ ಒಮ್ಮೆ ಶಾರೀರಿಕ ಸಂಬಂಧ ಬೆಳೆಸುವ ವ್ಯಕ್ತಿಗಳು ಶಾರೀರಿಕ ಸಂಬಂಧ ಬೆಳೆಸದ ವ್ಯಕ್ತಿಗಳಿಗೆ ಹೋಲಿಸಿದ್ರೆ ಹೆಚ್ಚು ಖುಷಿಯಾಗಿರುತ್ತಾರಂತೆ.

ನಿಯಮಿತ ರೂಪದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಅನೇಕ ಲಾಭಗಳಿವೆ. ಆದ್ರೆ ಅಚಾನಕ್ ನೀವು ಶಾರೀರಿಕ ಸಂಬಂಧ ಬೆಳೆಸುವುದನ್ನು ನಿಲ್ಲಿಸಿದ್ರೆ ಇದು ನಿಮ್ಮ ಜೀವನ ಹಾಗೂ ದಿನನಿತ್ಯದ ದಿನಚರಿ ಮೇಲೆ ಪ್ರಭಾವ ಬೀರುತ್ತದೆ.

ಯಾವ ವ್ಯಕ್ತಿ ಲೈಂಗಿಕವಾಗಿ ಸಕ್ರಿಯವಾಗಿರುವುದಿಲ್ಲವೋ ಅವ್ರು ಹೆಚ್ಚು ಒತ್ತಡದಲ್ಲಿರುತ್ತಾರೆ. ಶಾರೀರಿಕ ಸಂಬಂಧ ಬೆಳೆಸುವ ವ್ಯಕ್ತಿಗೆ ಒತ್ತಡ ಕಾಡುವುದು ಕಡಿಮೆ. ಸಂಶೋಧನೆ ಪ್ರಕಾರ ವಾರಕ್ಕೆ ಕನಿಷ್ಠ ಎರಡು ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಆ ವ್ಯಕ್ತಿ ಒತ್ತಡ ಹಾಗೂ ಆತಂಕದಿಂದ ಮುಕ್ತನಾಗಿರುತ್ತಾನಂತೆ.

ಶಾರೀರಿಕ ಸಂಬಂಧ ಬೆಳೆಸದ ಪುರುಷ ಆರೋಗ್ಯ ಸಮಸ್ಯೆ ಎದುರಿಸುತ್ತಾನೆ. ಶಾರೀರಿಕ ಸಂಬಂಧ ಬೆಳೆಸದ ಪುರುಷನಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ವಾರಕ್ಕೆ ಎರಡು ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಪುರುಷರಿಗೆ ಅನುಕೂಲವೆಂದು ವೈದ್ಯರು ಹೇಳಿದ್ದಾರೆ.

ಶಾರೀರಿಕ ಸಂಬಂಧ ಬೆಳೆಸುವುದು ಕಡಿಮೆಯಾಗ್ತಿದ್ದಂತೆ ಶೀತ, ಜ್ವರದಂತಹ ಖಾಯಿಲೆ ಕಾಡಲು ಶುರುವಾಗುತ್ತದೆಯಂತೆ. ಲೈಂಗಿಕ ಕ್ರಿಯೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ಶಾರೀರಿಕ ಸಂಬಂಧ ಬೆಳೆಸುವವರಲ್ಲಿ ಸೋಂಕಿನ ರೋಗಗಳು ಕಡಿಮೆಯಿರುತ್ತವೆ ಎಂದು ಸಂಶೋಧನೆ ಹೇಳುತ್ತದೆ.

ಶಾರೀರಿಕ ಸಂಬಂಧ ಬೆಳೆಸದೆ ಹೋದ ಮಹಿಳೆಯರ ಸ್ವಭಾವದಲ್ಲಿಯೂ ಸಾಕಷ್ಟು ಬದಲಾವಣೆ ಕಾಣಬಹುದು. ಸಣ್ಣ-ಸಣ್ಣ ಮಾತಿಗೆ ಕೋಪ ಬರುವುದು, ಕಿರಿಕಿರಿ ಸೇರಿದಂತೆ ಮಾನಸಿಕವಾಗಿ ಕೆಲ ಬದಲಾವಣೆಗಳಾಗುತ್ತವೆ. ಸೆಕ್ಸ್ ನಿಂದ ಒತ್ತಡ ಕಡಿಮೆಯಾಗಿ ಖುಷಿಯಾಗಿರುತ್ತಾರೆ ಮಹಿಳೆಯರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read