ಕೋನಾರ್ಕದಲ್ಲಿದೆ ಆಕರ್ಷಕ ಸೂರ್ಯ ದೇವಾಲಯ

ಕೊನಾರ್ಕದ ಸೂರ್ಯ ದೇವಾಲಯ ಒಡಿಶಾ ರಾಜ್ಯದ ಕರಾವಳಿಯಲ್ಲಿರುವ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿಂದ “ವಿಶ್ವ ಪರಂಪರೆಯ ತಾಣ” ಎಂಬ ಮಾನ್ಯತೆ ಪಡೆದಿದೆ.

ಕೋನಾರ್ಕ ದೇವಾಲಯವು ವಾಸ್ತವವಾಗಿ ಒಂದು ಕಲ್ಲಿನ ರಥ. ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ವಿರಾಜಮಾನನಾದ ಸೂರ್ಯದೇವನ ಈ ಗುಡಿಯನ್ನು ಗಂಗ ವಂಶದ ದೊರೆ ಮೂರನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದೆ.
ಗುಡಿಯ ಹೊರಗಿನ ಶಿಲ್ಪಕಲಾಕೃತಿಗಳು, ರಥಚಕ್ರಗಳ ಶ್ರೀಮಂತ ಸೌಂದರ್ಯ, ಮಿಥುನಶಿಲ್ಪಗಳ ಸಾಲುಸಾಲು ಗಮನ ಸೆಳೆಯುತ್ತವೆ. ಮಾತ್ರವಲ್ಲ ನರ್ತನಶಾಲೆ, ಕುದುರೆ ಮತ್ತು ಸವಾರ, ಆನೆ,ಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳೂ ಆಕರ್ಷಕವಾಗಿವೆ.

ಒಡಿಶಾದ ದೇವಸ್ಥಾನ ಶಿಲ್ಪಕಲೆಯ ಮೇರು ಕೃತಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಶಿಲ್ಪಕಲೆಯಲ್ಲಿ ಪ್ರಪಂಚದಲ್ಲೇ ಅತ್ಯಂತ ವೈಭವಪೂರ್ಣವಾದ ಉದಾಹರಣೆಗಳಲ್ಲಿ ಒಂದು ಎಂದೂ ಇದನ್ನು ಪರಿಗಣಿಸಲಾಗಿದೆ. 13 ನೆಯ ಶತಮಾನದಲ್ಲಿ ನರಸಿಂಹದೇವನಿಂದ ಕಟ್ಟಿಸಲ್ಪಟ್ಟ ಈ ದೇವಾಲಯದ ಮೂಲ ದೇವಾಲಯ ಇಂದು ಲಕ್ಷಾಂತರ ಜನರ ಆರಾಧನಾ ಹಾಗೂ ಪ್ರವಾಸಿ ತಾಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read