ಒಂದು ಕಪ್​​ ʼಮೊಸರುʼ ಮಾಡುತ್ತೆ ತ್ವಚೆ ಹಾಗೂ ಕೂದಲಿನ ಸೌಂದರ್ಯದ ಮ್ಯಾಜಿಕ್

ಮುಖದ ಕಾಂತಿಯನ್ನ ಹೆಚ್ಚು ಮಾಡಬೇಕು ಅಂತಾ ಮಾರುಕಟ್ಟೆಯಲ್ಲಿ ಸಿಗುವ ನೂರಾರು ಪ್ರಾಡಕ್ಟ್​ಗಳನ್ನ ಬಳಕೆ ಮಾಡುತ್ತೇವೆ.

ಆದರೆ ಕೆಲವೊಂದು ಪ್ರಾಡಕ್ಟ್​ಗಳಿಂದ ಅನುಕೂಲವಾಗೋಕ್ಕಿಂತ ಅನಾನುಕೂಲವಾಗೋದೇ ಜಾಸ್ತಿ. ಹೀಗಾಗಿ ನೀವು ಹೆಚ್ಚೇನು ಮಾಡಬೇಕಾಗಿಲ್ಲ. ಮೊಸರನ್ನ ನೀವು ನಿತ್ಯ ಬಳಕೆ ಮಾಡೋದ್ರಿಂದ ತ್ವಚೆಯ ಆರೋಗ್ಯದ ಜೊತೆಯಲ್ಲಿ ಕೂದಲಿನ ಆರೋಗ್ಯವನ್ನೂ ಕಾಪಾಡಬಹುದಾಗಿದೆ.

ಟ್ಯಾನ್​ ಸಮಸ್ಯೆಯಿಂದ ಪರಿಹಾರ: ಸೂರ್ಯನ ಶಾಖದಿಂದ ಕಪ್ಪಾದ ತ್ವಚೆಯ ಭಾಗಗಳಿಗೆ ಮೊಸರು ಉತ್ತಮ ಆರೈಕೆ ನೀಡುತ್ತೆ. ಟ್ಯಾನ್​ನಿಂದ ಪಾರಾಗಬೇಕು ಅಂದ್ರೆ 15 ನಿಮಿಷಗಳ ಕಾಲ ಮೊಸರನ್ನ ಮುಖಕ್ಕೆ ಹಚ್ಚಿಕೊಂಡು ಇಟ್ಟುಕ್ಕೊಳ್ಳಿ. ಮೊಸರಿಗೆ ಕಡ್ಲೆ ಹಿಟ್ಟು ಹಾಗೂ ನಿಂಬುರಸವನ್ನ ಬೆರೆಕೆ ಮಾಡಿದ ಫೇಸ್​​ ಪ್ಯಾಕ್​ ಟ್ಯಾನ್​ ಸಮಸ್ಯೆಯನ್ನ ದೂರಾಗಿಸುತ್ತೆ.

‌ ಮಾಯಿಶ್ಚರೈಸರ್​ : ಮೊಸರಿಗಿಂತ ಒಳ್ಳೆಯ ಮಾಯಿಶ್ಚರೈಸರ್ ನಿಮಗೆ ಮಾರುಕಟ್ಟೆಯಲ್ಲಿ ಸಿಗೋಕೆ ಸಾಧ್ಯಾನೇ ಇಲ್ಲ. ಮೊಸರಿಗೆ ಒಂದು ಚಮಚ ಜೇನುತುಪ್ಪವನ್ನ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ಮುಖ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖ ಸದಾ ಕಾಂತಿಯಿಂದ ಇರಲಿದೆ.

ಕೂದಲು : ಪ್ರತಿಯೊಬ್ಬರಿಗೂ ಮೃದುವಾದ, ರೇಷ್ಮೆಯಂತ ಕೂದಲು ಇರಬೇಕು ಎಂಬ ಆಸೆಯಿರುತ್ತೆ. ಇದಕ್ಕಾಗಿ ಮೊಸರನ್ನ ತಲೆಯ ಬುಡಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡಿ. ಹೊಟ್ಟಿನ ಸಮಸ್ಯೆಯನ್ನ ಹೊಂದಿರುವವರು ಕೂಡ ಮೊಸರಿನ ಜೊತೆ ಸ್ವಲ್ಪ ನಿಂಬೆ ರಸ ಮಿಶ್ರಣ ಮಾಡಿ ಹಚ್ಚಿದ್ರೆ ನಿಮ್ಮ ಸಮಸ್ಯೆ ದೂರಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read