ಹಾಸಿಗೆಯ ಮೇಲೆ ಹಾಯಾಗಿ ಸವಾರಿ ; ಪಶ್ಚಿಮ ಬಂಗಾಳದ ʼವಿಚಿತ್ರ ‘ಕಾರು’ | Watch Video

ಮುರ್ಷಿದಾಬಾದ್: ರಸ್ತೆಯಲ್ಲಿ ಓಡಾಡುವ ಸಾಮಾನ್ಯ ವಾಹನಗಳಿಗೆ ಬದಲಾಗಿ, ಹಾಸಿಗೆಯನ್ನೇ ಕಾರಿನಂತೆ ಮಾರ್ಪಡಿಸಿ ಓಡಿಸಿದರೆ ಹೇಗಿರುತ್ತದೆ ? ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ಇಂತಹದ್ದೊಂದು ವಿಚಿತ್ರ ಆವಿಷ್ಕಾರದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಮುರ್ಷಿದಾಬಾದ್‌ನ ನವಾಬ್ ಶೇಖ್ (27) ಎಂಬುವವರು ತಮ್ಮ ಮಲಗುವ ಹಾಸಿಗೆಯನ್ನು ಅಳವಡಿಸಿ ತಯಾರಿಸಿದ ವಿಶಿಷ್ಟ ವಾಹನವನ್ನು ರಸ್ತೆಗಿಳಿಸಿ ಸಖತ್ ವೈರಲ್ ಆಗಿದ್ದಾರೆ.

ನವಾಬ್ ಅವರು ರಾಣಿನಗರ-ಡೊಮ್ಕಲ್ ಮಾರ್ಗದಲ್ಲಿ ತಮ್ಮ ಹಾಸಿಗೆ ಆಧಾರಿತ ವಾಹನವನ್ನು ಚಲಾಯಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ವಿಡಿಯೊದಲ್ಲಿ ನವಾಬ್ ಅವರು ಸ್ಟೀರಿಂಗ್ ಹಿಡಿದು, ಒಂದು ಕೈಯನ್ನು ದಿಂಬಿನ ಮೇಲೆ ಇಟ್ಟುಕೊಂಡು ಆರಾಮವಾಗಿ ತಮ್ಮ ವಿಚಿತ್ರ ಕಾರನ್ನು ಓಡಿಸುತ್ತಿರುವುದು ಕಂಡುಬರುತ್ತದೆ.

ಈ ವಿಶೇಷ ವಾಹನದಲ್ಲಿ ಬ್ರೇಕ್, ರಿಯರ್ ವ್ಯೂ ಮಿರರ್ ಮತ್ತು ಸ್ಟೀರಿಂಗ್ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳೂ ಇವೆ. ಇದು ಸಾಮಾನ್ಯ ಕಾರಿನಂತೆ ನಾಲ್ಕು ಚಕ್ರಗಳನ್ನು ಹೊಂದಿದ್ದು ಚಲಿಸುತ್ತದೆ. ಆದರೆ ಇದರ ಮುಖ್ಯ ಆಕರ್ಷಣೆಯೆಂದರೆ ಇದರ ಆಸನ ವ್ಯವಸ್ಥೆ. ಸಾಮಾನ್ಯ ಕಾರಿನ ಸೀಟುಗಳ ಬದಲು, ಇಲ್ಲಿರುವುದು ಒಂದು ಆರಾಮದಾಯಕವಾದ ಸಂಪೂರ್ಣ ಹಾಸಿಗೆ!

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ನವಾಬ್, ಈ ‘ಹಾಸಿಗೆ ಕಾರು’ ಅನ್ನು ನಿರ್ಮಿಸಲು ಸಾಕಷ್ಟು ಸಮಯ ಮತ್ತು ಶ್ರಮವನ್ನು ಹಾಕಿದ್ದೇನೆ ಎಂದು ತಿಳಿಸಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಇದಕ್ಕಾಗಿ ತಮ್ಮ ಪತ್ನಿಯ ಆಭರಣಗಳನ್ನು ಮಾರಾಟ ಮಾಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಈ ವಿಚಿತ್ರ ಆವಿಷ್ಕಾರವು ತಕ್ಷಣವೇ ವೈರಲ್ ಆಗಿದ್ದು, ನವಾಬ್ ಅವರನ್ನು ರಾತ್ರೋರಾತ್ರಿ ಇಂಟರ್ನೆಟ್ ಸ್ಟಾರ್ ಆಗಿ ಪರಿವರ್ತಿಸಿದೆ.

ಈದ್ ಹಬ್ಬದ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಈ ವಿಡಿಯೊಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೆಟ್ಟಿಗರು ನವಾಬ್ ಅವರ ಈ ವಿಶಿಷ್ಟ ಕಲ್ಪನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read