ರಾಶಿಚಕ್ರಕ್ಕೆ ಅನುಗುಣವಾಗಿ ಸಂಗಾತಿಗೆ ನೀಡಬೇಕು ಬಣ್ಣದ ಗುಲಾಬಿ; ಆಗ ಅರಳುತ್ತೆ ಪ್ರೀತಿಯ ರಂಗು….!

 

ಫೆಬ್ರವರಿ ಪ್ರೇಮಿಗಳಿಗೆ ಮೀಸಲಾಗಿರುವ ತಿಂಗಳು. ವ್ಯಾಲೆಂಟೈನ್ ವೀಕ್ ಕೂಡ ಈಗಾಗ್ಲೇ ಪ್ರಾರಂಭವಾಗಿದೆ. ಈ ಲವ್‌ ವೀಕ್‌ ಶುರುವಾಗೋದು ರೋಸ್‌ ಡೇನಿಂದ. ಯುವಕರು ಮಾತ್ರವಲ್ಲದೆ ಎಲ್ಲಾ ವಯೋಮಾನದವರಲ್ಲೂ ಉತ್ಸಾಹ ತುಂಬಬಲ್ಲ ಆಚರಣೆ ಇದು.

ರೋಸ್‌ ಡೇ ಹಿನ್ನೆಲೆಯಲ್ಲಿ ಗುಲಾಬಿಗಳನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಆದರೆ ನಿಮ್ಮ ಪ್ರೀತಿಪಾತ್ರರ ರಾಶಿಚಕ್ರಗಳಿಗೆ ಅನುಗುಣವಾಗಿ ಬಣ್ಣದ ಗುಲಾಬಿಯನ್ನು ನೀಡಬೇಕು. ಯಾವ ಬಣ್ಣದ ಗುಲಾಬಿಯನ್ನು ಸಂಗಾತಿಗೆ ನೀಡಿದರೆ ಸಂಬಂಧ ಗಟ್ಟಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಕೆಂಪು ಗುಲಾಬಿ

ಕೆಂಪು ಗುಲಾಬಿಯನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯವರಿಗೆ ಕೆಂಪು ಗುಲಾಬಿ ಕೊಡಬಹುದು.

ಹಸಿರು ಗುಲಾಬಿ

ಹಸಿರು ಗುಲಾಬಿಯನ್ನು ಸಂತೋಷ ಮತ್ತು ಜೀವನದ ಹೊಸತನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನ್ಯಾರಾಶಿ ಅಥವಾ ಜೆಮಿನಿ ರಾಶಿಚಕ್ರದ ವ್ಯಕ್ತಿಗಳಿಗೆ ಹಸಿರು ಗುಲಾಬಿಗಳನ್ನು ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸಬಹುದು.

ನೇರಳೆ ಗುಲಾಬಿ

ನೇರಳೆ ಗುಲಾಬಿಯನ್ನು ಮೊದಲ ನೋಟದಲ್ಲೇ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ತುಲಾ ಮತ್ತು ವೃಷಭ ರಾಶಿಯವರಿಗೆ ನೇರಳೆ ಬಣ್ಣದ ಗುಲಾಬಿ ಕೊಡಬೇಕು.

ಹಳದಿ ಗುಲಾಬಿ

ಹಳದಿ ಗುಲಾಬಿಯನ್ನು ಆಳವಾದ ಸ್ನೇಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧನು ರಾಶಿ ಮತ್ತು ಮೀನ ರಾಶಿಯವರಿಗೆ  ರೋಸ್‌ ಡೇ ದಿನ ಹಳದಿ ಗುಲಾಬಿಗಳನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಇದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ.

ಲ್ಯಾವೆಂಡರ್ ಗುಲಾಬಿ

ಜ್ಯೋತಿಷ್ಯದ ಪ್ರಕಾರ ಸಿಂಹ ರಾಶಿಯವರು ಲ್ಯಾವೆಂಡರ್ ಬಣ್ಣದ ಗುಲಾಬಿಗಳನ್ನು ಇಷ್ಟಪಡುತ್ತಾರೆ. ನಿಮ್ಮ ಸಂಗಾತಿ ಸಿಂಹ ರಾಶಿಯವರಾಗಿದ್ದರೆ ಅವರಿಗೆ ಲ್ಯಾವೆಂಡರ್‌ ಬಣ್ಣದ ಗುಲಾಬಿಯನ್ನು ನೀಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read