BREAKING : ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಮಲಯಾಳಂ ನಟ ‘ಶಿಯಾಸ್ ಕರೀಂ’ ಅರೆಸ್ಟ್

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪದರ್ಶಿ ಮತ್ತು ಸ್ಟಾರ್ ಮ್ಯಾಜಿಕ್ ಖ್ಯಾತಿಯ ಶಿಯಾಸ್ ಕರೀಮ್ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ವಿದೇಶದಿಂದ ಹಿಂದಿರುಗಿದ ಶಿಯಾಸ್ ನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನನ್ನು ಶೀಘ್ರದಲ್ಲೇ ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ವರದಿಯಾಗಿದೆ.
ಮಹಿಳಾ ಜಿಮ್ ತರಬೇತುದಾರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿಯಾಸ್ ಕರೀಮ್ ವಿರುದ್ಧ ಕಾಸರಗೋಡಿನ ಚಂಥೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟ ಶಿಯಾಸ್ ನನ್ನನ್ನು ಮದುವೆಯಾಗುವುದಾಗಿ ನೆಪದಲ್ಲಿ ಹಲವು ಕಡೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಹಾಗೂ ನನ್ನಿಂದ 11 ಲಕ್ಷ ರೈ ಪಡೆದಿದ್ದಾನೆ, ಅದನ್ನು ಇದುವರೆಗೆ ನೀಡಿಲ್ಲ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದರು.ಇದರ ನಡುವೆ ಶಿಯಾಸ್ ದುಬೈಗೆ ಹಾರಿದ್ದನು, ನಟ ಶಿಯಾಸ್ ನಿನ್ನೆ ದುಬೈನಿಂದ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿದ್ದಾನೆ. ಈ ವೇಳೆ ನಟನನ್ನು ವಿಚಾರಿಸಿದ ಅಧಿಕಾರಿಗಳು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read