ಪ್ರೀತಿಸಿದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾಳಿ ಕಟ್ಟುವಾಗ ಮದುವೆ ನಿರಾಕರಿಸಿದ ವಧು

ಹಾಸನ: ಮದುವೆ ಮಂಟಪದಲ್ಲಿ ವರ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ನನಗೆ ಮದುವೆ ಬೇಡ ಎಂದು ಹಠ ಹಿಡಿದಿದ್ದರಿಂದ ಮದುವೆ ಸ್ಥಗಿತಗೊಂಡ ಘಟನೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದಿದೆ.

ಬೆಳಗ್ಗೆ ಮದುವೆ ನಿಂತಿದ್ದು, ಸಂಜೆ ಅದೇ ಮಂಟಪದ ಆವರಣದಲ್ಲಿರುವ ದೇವಾಲಯದಲ್ಲಿ ಯುವತಿ ಪ್ರೀತಿಸಿದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಮತ್ತು ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲೆ ಶಿಕ್ಷಕ ಜಿ. ವೇಣುಗೋಪಾಲ್ ಅವರ ಮದುವೆ ಶುಕ್ರವಾರ ನಿಗದಿಯಾಗಿತ್ತು. ಮುಹೂರ್ತದ ಸಂದರ್ಭದಲ್ಲಿ ಪಲ್ಲವಿಗೆ ಫೋನ್ ಕರೆ ಬಂದಿದ್ದು, ನಂತರ ಮನಸ್ಸು ಬದಲಾಯಿಸಿಕೊಂಡ ಪಲ್ಲವಿ ಬೇರೆ ಹುಡುಗನನ್ನು ಪ್ರೀತಿಸುತ್ತಿರುವ ಬಗ್ಗೆ ತಿಳಿಸಿ ನನಗೆ ಮದುವೆ ಬೇಡ ಎಂದು ಹೇಳಿದ್ದಾರೆ.

ಆದರೂ ವೇಣುಗೋಪಾಲ್ ಮತ್ತು ಅವರ ಕುಟುಂಬದವರು ಮನವೊಲಿಸಲು ಪ್ರಯತ್ನ ನಡೆಸಿದರೂ ಪಲ್ಲವಿ ಒಪ್ಪಿಲ್ಲ. ಕೊನೆಗೆ ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದರಿಂದ ಮದುವೆಯನ್ನು ರದ್ದುಪಡಿಸಲಾಗಿದೆ.

ಸಂಜೆ ವೇಳೆಗೆ ಪ್ರೀತಿಸಿದ ಯುವಕನ ಜೊತೆಗೆ ಹುಡುಗಿಯನ್ನು ಪೋಷಕರು ಮದುವೆ ಮಾಡಿಕೊಟ್ಟಿದ್ದಾರೆ. ಗಣಪತಿ ದೇವಾಲಯದಲ್ಲಿ ಪ್ರೀತಿಸಿದ ಹುಡುಗ ರಘು ಜೊತೆಗೆ ಪಲ್ಲವಿ ಮದುವೆಯಾಗಿದೆ. ಪಲ್ಲವಿ ಮತ್ತು ರಘು ಪೋಷಕರ ಸಮ್ಮುಖದಲ್ಲಿ ಮದುವೆ ನಡೆದಿದೆ. ಮಗಳ ಕೋರಿಕೆಯಂತೆ ಇಷ್ಟಪಟ್ಟ ಹುಡುಗ ಹಾಸನ ತಾಲೂಕಿನ ಬಸವನಹಳ್ಳಿ ನಿವಾಸಿಯಾಗಿರುವ ರಘು ಜೊತೆಗೆ ಯುವತಿ ಪೋಷಕರು ಮದುವೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read