ಬಾಗಲಕೋಟೆ : ಸರಗಳ್ಳತನಕ್ಕೆಂದು ಮನೆ ಬಾಗಿಲಿಗೆ ಬಂದಿದ್ದ ದುಷ್ಕರ್ಮಿಗಳ ಮುಖಕ್ಕೆ ಮಹಿಳೆಯೊಬ್ಬರು ಜಿರಳೆ ಸ್ಪ್ರೇ ಸಿಂಪಡಿಸಿ ಓಡಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಮಖಂಡಿಯ ಗೌತಮಬುದ್ಧ ಕಾಲೋನಿ ಯಲ್ಲಿ ಈ ಘಟನೆ ನಡೆದಿದೆ. ಪೃಥ್ವಿ ಪ್ರದೀಪ ನವಣಿ ಎಂಬ ಮಹಿಳೆ ಕಳ್ಳರನ್ನು ಧೈರ್ಯದಿಂದ ಓಡಿಸಿ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದಾರೆ.
ಪೃಥ್ವಿ ಪ್ರದೀಪ್ ಮನೆಯಲ್ಲಿ ಒಬ್ಬತರೇ ಇದ್ದಾಗ ಸ್ಕೆಚ್ ಹಾಕಿದ ಖದೀಮರು ಮಧ್ಯಾಹ್ನ 12ರ ಸುಮಾರಿಗೆ ಮನೆಗೆ ಬಂದು ಬಾಗಿಲು ತಟ್ಟಿ ಪೃಥ್ವಿ ಅವರನ್ನು ಮನೆಯಿಂದ ಹೊರಗೆ ಕರೆದಿದ್ದಾರೆ. ಈ ವೇಳೆ ಕುತ್ತಿಗೆಯಲ್ಲಿದ್ದ ಸರ ಕಸಿಯಲು ಯತ್ನಿಸಿದ್ದಾರೆ. ತಕ್ಷಣ ಮಹಿಳೆ ಕಳ್ಳರ ಮುಖಕ್ಕೆ ಮನೆಯಲ್ಲಿದ್ದ ಜಿರಳೆ ಸ್ಪ್ರೇ ಸ್ಟೇ ಹೊಡೆದು ಓಡಿಸಿದ್ದಾರೆ.
You Might Also Like
TAGGED:ಜಿರಳೆ ಸ್ಪ್ರೇ'