ದಿನವಿಡೀ ದಣಿದ ದೇಹಕ್ಕೆ ಬಿಡುವಿನ ವೇಳೆಯಲ್ಲಿ ಇರಲಿ ಒಂದಿಷ್ಟು ರಿಲ್ಯಾಕ್ಸ್

ಆಧುನಿಕ ಜೀವನ ಶೈಲಿಯಿಂದ ಜನರ ಕೆಲಸದ ವಿಧಾನಗಳು ಬದಲಾಗಿವೆ. ಹಿಂದೆಲ್ಲಾ ದೈಹಿಕ ಶ್ರಮದ ಕೆಲಸಗಳು ಹೆಚ್ಚಾಗಿದ್ದವು. ಈಗ ಮಾನಸಿಕ ಒತ್ತಡದ ಕೆಲಸಗಳೇ  ಜಾಸ್ತಿಯಾಗಿವೆ.

ದೈಹಿಕ ಶ್ರಮದ ಜೊತೆಗೆ ಮಾನಸಿಕ ಒತ್ತಡಗಳಿಂದ ಕೆಲಸ ಮಾಡುವುದರಿಂದ ದೇಹ, ಮನಸ್ಸು ದಣಿಯುತ್ತದೆ. ದಣಿವಾದಾಗ ದೇಹ, ಮನಸ್ಸು ವಿಶ್ರಾಂತಿ ಬಯಸುತ್ತದೆ. ದಣಿವರಿಯದೇ ದುಡಿಯುವುದರಿಂದ ಒತ್ತಡಕ್ಕೆ ಒಳಗಾಗಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಬಿಡುವಿನ ವೇಳೆಯಲ್ಲಿ ಒಂದಿಷ್ಟು ರಿಲ್ಯಾಕ್ಸ್ ಮಾಡಿಕೊಳ್ಳಿ.

ಕೆಲಸ ಮಾಡುವಾಗಲೇ ಮೊಬೈಲ್ ರಿಂಗಣಿಸುತ್ತದೆ. ಮೊಬೈಲ್ ಸೌಂಡ್ ಆದ ಕೂಡಲೇ ಕೆಲಸದ ಮೇಲಿನ ಗಮನವೆಲ್ಲಾ ಫೋನ್ ಕಡೆಗೆ ಹರಿಯುತ್ತದೆ. ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಹೆಚ್ಚಾಗಿ ಮೊಬೈಲ್ ಬಳಸುವುದರಿಂದಲೂ ಏಕಾಗ್ರತೆ ಕಡಿಮೆಯಾಗುತ್ತದೆ.

ಸದಾ ಒತ್ತಡದಲ್ಲಿ ಕೆಲಸ ಮಾಡುವವರು, ಸಿಕ್ಕ ಅಲ್ಪ ವೇಳೆಯಲ್ಲಿ ಒಂದಿಷ್ಟು ರಿಲ್ಯಾಕ್ಸ್ ಪಡೆಯಿರಿ. ಆಗ ಹೊಸ ಚೈತನ್ಯದೊಂದಿಗೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read