ಬೈಕ್‌ ಪ್ರಿಯರಿಗೆ ಹೊಸ ವರ್ಷದಂದೇ ಬಿಗ್‌ ಶಾಕ್‌; ಮತ್ತಷ್ಟು ದುಬಾರಿಯಾಗಿದೆ ಈ ಫೇಮಸ್‌ ಮೋಟಾರ್‌ ಸೈಕಲ್‌…!

ರಾಯಲ್ ಎನ್‌ಫೀಲ್ಡ್ ಕಂಪನಿ ಹಿಮಾಲಯನ್ 450 ಅಡ್ವೆಂಚರ್ ಮೋಟಾರ್‌ಸೈಕಲ್‌ನ ಬೆಲೆಗಳನ್ನು 2023ರ ನವೆಂಬರ್‌ನಲ್ಲಿ ಘೋಷಿಸಿತ್ತು. ಈ ಮೋಟಾರ್‌ ಸೈಕಲ್ 3 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ – ಬೇಸ್, ಪಾಸ್ ಮತ್ತು ಸಮ್ಮಿಟ್. ಇವುಗಳ ಬೆಲೆ 2.69 ಲಕ್ಷದಿಂದ ಪ್ರಾರಂಭವಾಗಿ 2.84 ಲಕ್ಷ ರೂಪಾಯಿವರೆಗಿದೆ. ಈ ಪರಿಚಯಾತ್ಮಕ ಬೆಲೆ 2023ರ ಡಿಸೆಂಬರ್ 31ರವರೆಗೆ ಮಾನ್ಯವಾಗಿತ್ತು. ಈಗ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗಳು ದುಬಾರಿಯಾಗಿವೆ. ಕಂಪನಿ ಬೆಲೆಯನ್ನು 16,000 ರೂಪಾಯಿಗಳಷ್ಟು ಹೆಚ್ಚಿಸಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ನವೀಕೃತ ಬೆಲೆ

— ಕಾಜಾ ಬ್ರೌನ್- 2.85 ಲಕ್ಷ ರೂ.

— ಸ್ಲೇಟ್ ಬ್ಲೂ ಮತ್ತು ಸಾಲ್ಟ್‌ – 2.89 ಲಕ್ಷ ರೂ.

— ಕಾಮೆಟ್ ವೈಟ್- 2.93 ಲಕ್ಷ ರೂ.

— ಹ್ಯಾನ್ಲಿ ಬ್ಲಾಕ್- 2.98 ಲಕ್ಷ ರೂ.

ಹಿಮಾಲಯನ್ 450 ಕಾಜಾ ಬ್ರೌನ್ ಪೇಂಟ್ ಸ್ಕೀಮ್ ಈಗ 16,000 ರೂ.ಗಳಷ್ಟು ದುಬಾರಿಯಾಗಿದೆ. ಈಗ ಅದರ ಬೆಲೆ 2.69 ಲಕ್ಷದಿಂದ 2.85 ಲಕ್ಷಕ್ಕೆ ಏರಿಕೆಯಾಗಿದೆ. ಕಂಪನಿಯು ಸ್ಲೇಟ್ ಬ್ಲೂ ಮತ್ತು ಸಾಲ್ಟ್ ರೂಪಾಂತರಗಳ ಬೆಲೆಯನ್ನು 15,000 ರೂ.ಗಳಷ್ಟು ಹೆಚ್ಚಿಸಿದೆ. ಈಗ ಅದರ ಬೆಲೆ 2.89 ಲಕ್ಷ ರೂ. ಹಿಮಾಲಯನ್ 450 ಕಾಮೆಟ್ ವೈಟ್ ಮತ್ತು ಹೆನ್ಲಿ ಬ್ಲ್ಯಾಕ್ ಬಣ್ಣದ ರೂಪಾಂತರಗಳನ್ನು ಕೊಂಡುಕೊಳ್ಳಲು ಈಗ 14,000 ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಕಾಮೆಟ್ ವೈಟ್ ಬೆಲೆ ಈಗ 2.93 ಲಕ್ಷ ರೂಪಾಯಿ.  ಅಗ್ರಸ್ಥಾನದಲ್ಲಿರುವ ಹ್ಯಾನ್ಲಿ ಬ್ಲಾಕ್ ದರ 2.98 ಲಕ್ಷಕ್ಕೆ ಏರಿದೆ.

ಹೊಸ RE ಹಿಮಾಲಯನ್ ಹೊಸ 451.65cc, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಸಿಂಗಲ್ ಸಿಲಿಂಡರ್ ಎಂಜಿನ್ 8,000rpm ನಲ್ಲಿ 40bhp ಪವರ್ ಔಟ್‌ಪುಟ್ ಮತ್ತು 5,500rpm ನಲ್ಲಿ 40Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್‌ಟ್ರೇನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌, ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಮೋಟಾರ್‌ಸೈಕಲ್ ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ.

ಈ ಬೈಕು ಹೊಸ ಟ್ವಿನ್-ಸ್ಪಾರ್ ಫ್ರೇಮ್ ಅನ್ನು ಆಧರಿಸಿದೆ.  ಇದು ಓಪನ್ ಕಾರ್ಟ್ರಿಡ್ಜ್ USD ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪೂರ್ವ ಲೋಡ್ ಅಡ್ಜಸ್ಟ್‌ ಮಾಡಬಹುದಾದ ಮೊನೊಶಾಕ್ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಮೋಟಾರ್‌ಸೈಕಲ್ 21 ಇಂಚಿನ ಫ್ರಂಟ್‌ ಮತ್ತು 17 ಇಂಚಿನ ಬ್ಯಾಕ್‌ ರಿಮ್ ಅನ್ನು ಹೊಂದಿದೆ. ಇದು ಕಸ್ಟಮ್ ಟ್ಯೂಬ್‌ಗಳೊಂದಿಗೆ CEAT ಟೈರ್‌ಗಳನ್ನು ಪಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read