ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ 70 ವರ್ಷದ ಮಹಿಳೆ, ವಯಸ್ಸಾದ ಬಳಿಕ ಗರ್ಭಧರಿಸುವುದರಿಂದ ಆಗಬಹುದು ಇಷ್ಟೆಲ್ಲಾ ಅನಾನುಕೂಲತೆ…!

ಉಗಾಂಡಾದ 70 ವರ್ಷದ ಮಹಿಳೆ ಸಫೀನಾ ನಮುಕ್ವೆಯಾ ಎಂಬಾಕೆ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಾಮಾನ್ಯವಾಗಿ 40 ವರ್ಷ ವಯಸ್ಸಿನ ನಂತರ ಮಹಿಳೆಯರು ಗರ್ಭಧರಿಸುವುದು ಕಷ್ಟ. ಅಂಥದ್ರಲ್ಲಿ 70ರ ಹರೆಯದಲ್ಲೂ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿರೋದು ಅಚ್ಚರಿ ಮೂಡಿಸಿದೆ.

ಸಫೀನಾಗೆ ತಾಯಿಯಾಗಬೇಕೆಂಬ ಹಂಬಲವಿತ್ತು. ಗರ್ಭಿಣಿಯಾಗಿಲ್ಲ ಎಂಬ ಕಾರಣಕ್ಕೆ ಗ್ರಾಮೀಣ ಸಮುದಾಯದಲ್ಲಿ ಆಕೆಯನ್ನು ‘ಶಾಪಗ್ರಸ್ತ ಮಹಿಳೆ’ ಎಂದು ಕರೆಯಲಾಗುತ್ತಿತ್ತು. ಕೊನೆಗೂ ಸಫೀನಾ IVF ನೆರವಿನಿಂದ ಅವಳಿ ಮಕ್ಳನ್ನು ಪಡೆದಿದ್ದಾರೆ.

ವಯಸ್ಸು ಮೀರಿದ ಬಳಿಕ ಗರ್ಭಧರಿಸುವುದು ಮಹಿಳೆಯರಿಗೆ ಸಾಕಷ್ಟು ಅನಾನುಕೂಲಗಳನ್ನು ತಂದಿಡುತ್ತದೆ. 35 ವರ್ಷಗಳ ನಂತರ ಗರ್ಭಪಾತದ ಅಪಾಯವು ಹೆಚ್ಚಾಗುತ್ತದೆ. 40ರ ನಂತರ ಗರ್ಭ ಧರಿಸುವುದರಿಂದ ಪ್ರೀ-ಎಕ್ಲಾಂಪ್ಸಿಯಾ, ಮಧುಮೇಹ ಮತ್ತು ಹೆರಿಗೆಯ ಸಮಯದಲ್ಲಿ ಅತಿಯಾದ ರಕ್ತಸ್ರಾವದಂತಹ ಸಮಸ್ಯೆಗಳು ಆಗಬಹುದು. ಅಷ್ಟೇ ಅಲ್ಲ ಮಗುವಿನ ಜನ್ಮಜಾತ ಅಸ್ವಸ್ಥತೆಗಳ ಅಪಾಯ ಕೂಡ ಹೆಚ್ಚಾಗಿರುತ್ತದೆ.

ಈ ಎಲ್ಲಾ ಅನಾನುಕೂಲತೆಗಳ ಹೊರತಾಗಿ ವಯಸ್ಸಾದ ಬಳಿಕ ಮಹಿಳೆ ಗರ್ಭಧರಿಸಿದ್ರೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸವಾಲುಗಳನ್ನು ಎದುರಿಸಬಹುದು. ಗರ್ಭಾವಸ್ಥೆಯಲ್ಲಿ ಹೆಚ್ಚು ಆಯಾಸ, ವಾಕರಿಕೆ ಮತ್ತು ಇತರ ಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read