ರಾತ್ರಿ ಮಲಗುವ ಮುನ್ನ ಈ 5 ಹಣ್ಣುಗಳನ್ನು ತಿನ್ನಬೇಡಿ, ಆರೋಗ್ಯಕ್ಕಾಗಬಹುದು ಅಪಾಯ!

ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಅವುಗಳನ್ನು ತಿನ್ನಲು ನಿರ್ದಿಷ್ಟ ಸಮಯವನ್ನು ಅನುಸರಿಸಬೇಕು. ಕೆಲವು ಹಣ್ಣುಗಳನ್ನು ರಾತ್ರಿ ತಿನ್ನುವುದು ಹಾನಿಕಾರಕ.

ದ್ರಾಕ್ಷಿ : ದ್ರಾಕ್ಷಿ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ರುಚಿಕರವಾದ ಹಣ್ಣು. ಆದರೆ ರಾತ್ರಿ ಮಲಗುವ ಮುನ್ನ ದ್ರಾಕ್ಷಿ ತಿನ್ನುವುದು ಹಾನಿಕಾರಕ. ದ್ರಾಕ್ಷಿಯಲ್ಲಿ ಸಿಟ್ರಿಕ್ ಅಂಶವಿರುತ್ತದೆ. ಇದರಿಂದ ಎದೆಯುರಿ ಬರಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟ ಕೂಡ ಹೆಚ್ಚಳವಾಗಬಹುದು.

ಕಲ್ಲಂಗಡಿ: ರಾತ್ರಿ ಮಲಗುವ ಮುನ್ನ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಹಾನಿಕರ. ರಾತ್ರಿಯಲ್ಲಿ ಕಲ್ಲಂಗಡಿ ತಿನ್ನುವುದರಿಂದ ಪದೇ ಪದೇ ಮೂತ್ರಕೋಶ ಭರ್ತಿಯಾಗುತ್ತದೆ. ಈ ಕಾರಣದಿಂದಾಗಿ  ರಾತ್ರಿ ನಿದ್ರೆಗೆ ಭಂಗ ಬರುತ್ತದೆ.

ಕಿತ್ತಳೆ : ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ರಾತ್ರಿಯಲ್ಲಿ ಇದನ್ನು ತಿನ್ನಬಾರದು. ರಾತ್ರಿ ಮಲಗುವ ಮುನ್ನ ಕಿತ್ತಳೆ ತಿನ್ನುವುದರಿಂದ ಅಸ್ವಸ್ಥತೆ ಉಂಟಾಗುತ್ತದೆ. ಇದು ಹೊಟ್ಟೆ ನೋವಿಗೆ ಕಾರಣವಾಗಬಹುದು.

ಸೀಬೆಹಣ್ಣು : ಪೇರಲ ಹಣ್ಣಿನಲ್ಲಿ ಬಹಳಷ್ಟು ಫೈಬರ್ ಇರುತ್ತದೆ. ಇದನ್ನು ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ, ಆದರೆ ರಾತ್ರಿ ಮಲಗುವ ಮೊದಲು ಇದನ್ನು ತಿನ್ನಬಾರದು. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ ರಾತ್ರಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ, ಪರಿಣಾಮ ಹೊಟ್ಟೆ ನೋವು ಬರಬಹುದು.

ಬಾಳೆಹಣ್ಣು: ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ  ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳು ಸಿಗುತ್ತದೆ. ಒಂದು ಬಾಳೆಹಣ್ಣಿನಲ್ಲಿ ಸುಮಾರು 150 ಕ್ಯಾಲೋರಿಗಳಿರುತ್ತದೆ, 37.5 ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಆದರೆ ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಬೊಜ್ಜು ಬರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read