ನಾಳೆ ಬಿಡುಗಡೆಯಾಗಲಿದೆ ‘ಭಾರತೀಯುಡು 2’ ಟ್ರೈಲರ್

ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ‘ಭಾರತೀಯುಡು 2’  ಚಿತ್ರ ಇದೆ ಜುಲೈ 12ಕ್ಕೆ ತೆರೆ ಮೇಲೆ ಬರಲಿದ್ದು, ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ಟ್ರೈಲರ್ ನಾಳೆ ಸೋನಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಶಂಕರ್ ನಿರ್ದೇಶನದ ಈ ಚಿತ್ರವನ್ನು ಸುಭಾಸ್ಕರನ್ ಅಲ್ಲಿರಾಜ ಹಾಗೂ ಉದಯನಿಧಿ ಸ್ಟಾಲಿನ್ ನಿರ್ಮಾಣ ಮಾಡಿದ್ದು, ಕಮಲ್ ಹಾಸನ್ ಸೇರಿದಂತೆ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, SJ ಸೂರ್ಯ, ವಿ ಭವಾನ್ ಸಿಂಹ, ವಿ ಭವನ್ ಸಿಂಹ, ವಿ. ಶಂಕರ್, ಬ್ರಹ್ಮಾನಂದಂ, ಸಮುದ್ರಕನಿ, ನೆಡುಮುಡಿ ವೇಣು, ದೆಹಲಿ ಗಣೇಶ್, ಮನೋಬಾಲಾ, ಜಗನ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಜಾಕಿರ್ ಹುಸೇನ್, ಪಿಯೂಷ್ ಮಿಶ್ರಾ, ಅಖಿಲೇಂದ್ರ ಮಿಶ್ರಾ ಬಣ್ಣ ಹಚ್ಚಿದ್ದಾರೆ. ಶೇಖರ್ ಪ್ರಸಾದ್ ಸಂಕಲನ, ಹನುಮಾನ್ ಚೌದರಿ ಸಂಭಾಷಣೆ, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ.

https://twitter.com/telugufilmnagar/status/1804753218754498868

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read