alex Certify ಮಧುಮೇಹ ರೋಗಿಗಳಿಗೆ ಔಷಧಿಗಿಂತಲೂ ಹೆಚ್ಚು ಪರಿಣಾಮಕಾರಿ ಈ ಹೊಸ ಡಯಟ್‌ ಪ್ಲಾನ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಮೇಹ ರೋಗಿಗಳಿಗೆ ಔಷಧಿಗಿಂತಲೂ ಹೆಚ್ಚು ಪರಿಣಾಮಕಾರಿ ಈ ಹೊಸ ಡಯಟ್‌ ಪ್ಲಾನ್‌…..!

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಾಗಾಗಿ ಆರೋಗ್ಯಕರ ಜೀವನ ಶೈಲಿಯನ್ನೇ ಅವರು ಅಳವಡಿಸಿಕೊಳ್ಳಬೇಕು. ಸಕ್ಕರೆ ಪ್ರಮಾಣ ಅಧಿಕವಾಗದಂತೆ ಅಥವಾ ಕಡಿಮೆಯಾಗದಂತೆ ತಡೆಯಲು ಸಮಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳಬೇಕು.

ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಡಾ.ಮೈಕೆಲ್ ಮೊಸ್ಲೆ ಸಿದ್ಧಪಡಿಸಿದ 5:2 ಡಯಟ್‌ ಪ್ಲಾನ್‌, ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಿಗೆ ಔಷಧಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗ್ತೊದೆ. ಔಷಧಿ ಇಲ್ಲದೆ ಮಧುಮೇಹವನ್ನು ನಿಯಂತ್ರಿಸಲು ಬಯಸಿದರೆ ಈ ಆಹಾರ ಕ್ರಮವನ್ನು ಪ್ರಯತ್ನಿಸಬಹುದು.

5:2 ಡಯಟ್‌ ಪ್ಲಾನ್‌ ಎಂದರೇನು?

5:2 ಡಯಟ್‌ ಪಾನ್‌, ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್‌ ಅನ್ನೇ ಹೋಲುತ್ತದೆ. ಇದು ಐದು ದಿನಗಳವರೆಗೆ ಯಾವುದೇ ಇಂದ್ರಿಯನಿಗ್ರಹವಿಲ್ಲದೆ ತಿನ್ನುವುದು ಮತ್ತು ಸತತ ಎರಡು ದಿನಗಳವರೆಗೆ ಕ್ಯಾಲೊರಿಗಳನ್ನು 500-600 ರಷ್ಟು ಕಡಿತಗೊಳಿಸುವುದು. ಸೀಮಿತ ಕ್ಯಾಲೋರಿಗಳೊಂದಿಗೆ ಒಂದು ದಿನದ ನಂತರ, ದೇಹವು ಕೊಬ್ಬನ್ನು ಸುಡಲು ಆಹಾರದಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಬಳಸಲು ಪ್ರಾರಂಭಿಸುತ್ತದೆ. ಈ ಡಯಟ್‌ ಅನುಸರಿಸುವುದು ಗ್ಲೈಸೆಮಿಕ್ ನಿಯಂತ್ರಿಸಲು ಮಾತ್ರವಲ್ಲದೆ ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

405 ವಯಸ್ಕರ ಮೇಲೆ ನಡೆಸಿದ ಈ ಅಧ್ಯಯನದಲ್ಲಿ, ಮೆಟ್‌ಫಾರ್ಮಿನ್ ಮತ್ತು ಎಂಪಾಗ್ಲಿಫ್ಲೋಜಿನ್‌ಗೆ ಹೋಲಿಸಿದರೆ 5:2 ಆಹಾರಕ್ರಮವು ಉತ್ತಮ ಗ್ಲೈಸೆಮಿಕ್ ನಿಯಂತ್ರಣಕ್ಕೆ (ರಕ್ತದಲ್ಲಿನ ಗ್ಲೂಕೋಸ್ ಮಟ್ಟ) ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಇದು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.

5:2 ಆಹಾರಕ್ರಮವನ್ನು ಅನುಸರಿಸಿದ ಮಧುಮೇಹ ರೋಗಿಗಳು ಮೂರು ತಿಂಗಳಲ್ಲಿ ಸರಾಸರಿ HbA1C ರಕ್ತದ ಸಕ್ಕರೆಯಲ್ಲಿ ಗಮನಾರ್ಹ ಕುಸಿತವನ್ನು ಕಂಡಿದ್ದಾರೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ. ಇದಲ್ಲದೆ ಅವರ ಸೊಂಟದ ಕೊಬ್ಬು ಸಹ ಕಡಿಮೆಯಾಗಿತ್ತು. ಆದರೆ ಈ ಡಯಟ್‌ ಅನುಸರಿಸುವ ಮುನ್ನ ವೈದ್ಯರ ಸಲಹೆ ಕೂಡ ಪಡೆಯುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...