ಇತ್ತೀಚಿಗಷ್ಟೇ ತನ್ನ ಟೈಟಲ್ ಟ್ರ್ಯಾಕ್ ಮೂಲಕ ಸಾಕಷ್ಟು ಸದ್ದು ಮಾಡಿರುವ ‘ನಾಟೌಟ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುತ್ತಲೇ ಇದೆ. ಇದೀಗ ನಾಟ್ ಔಟ್ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ಇದೇ ಜೂನ್ 27ರಂದು ರಿಲೀಸ್ ಆಗಲಿದೆ. ‘ದುಃಖ ದುಗುಡಗಳ’ ಎಂಬ ಈ ಹಾಡಿಗೆ ಅದಿತಿ ಸಾಗರ್ ಧ್ವನಿಯಾಗಿದ್ದು, ಜುಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಅಂಬರೀಶ ಎಮ್ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ಪೃಥ್ವಿ ಸೇರಿದಂತೆ ರವಿಶಂಕರ್, ರಚನಾ ಇಂದರ್, ಕಾಕ್ರೋಚ್ ಸುಧಿ, ಸಲ್ಮಾನ್, ಪ್ರಶಾಂತ್ ಸಿದ್ದಿ, ಗೋಪಾಲ್ ಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಅಶ್ವಿನ್ ಹಸನ್, ನಿರೂಪ್ ಬಣ್ಣ ಹಚ್ಚಿದ್ದಾರೆ. ರಾಷ್ಟ್ರಕೂಟ ಪಿಚ್ಚರ್ಸ್ ಬ್ಯಾನರ್ ನಡಿ ವಿ ರವಿಕುಮಾರ್ ಹಾಗೂ ಶಾಮ್ ಶುದ್ದಿನ್ ನಿರ್ಮಾಣ ಮಾಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಅಂಬರೀಶ ಎಮ್ ಸಾಹಸ ನಿರ್ದೇಶನ, ಹಾಲೇಶ್ ಅವರ ಛಾಯಾಗ್ರಹಣವಿದೆ.