ಚಿತ್ರದುರ್ಗ: ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ-ಆರ್ ಎಲ್ ವಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಸ್ರೋ ಪ್ರಮುಖ ಮೈಲುಗಲ್ಲು ಸಾಧಿಸಿದೆ. ಇಸ್ರೋದಿಂದ RLV LEX-03 ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ.
ಇಂದು ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ ಎರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ RLV LEX-03 ಲ್ಯಾಂಡಿಂಗ್ ಪ್ರಯೋಗ ನಡೆಸಲಾಗಿದ್ದು, ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.
RLV LEX-03 ಪ್ರಯೋಗದ ವೇಳೆ ಯಶಸ್ವಿಯಾಗಿ ರನ್ ವೇ ಮೇಲೆ ಇಳಿದಿದೆ. ಪುಷ್ಪಕ್ ಎಂವ ವಾಹನವನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಮೇಲಕ್ಕೆ ಕೊಂಡೊಯ್ಯಲಾಯಿತು. ಬಳಿಕ 4.5ಕಿ.ಮೀ ಎತ್ತರದಿಂದ ಅದನ್ನು ಲ್ಯಾಂಡಿಂಗ್ ಗೆ ಬಿಡಲಾಯಿತು. ಇದು ನಿಖರವಾಗಿ ರನ್ ವೇ ನಲ್ಲಿ ಇಳಿದಿದ್ದು, ಬ್ರೇಕ್ ಪ್ಯಾರಾಚೂಟ್, ಲ್ಯಾಂಡಿಂಗ್ ಗೇರ್ ಬ್ರೇಕರ್ ಗಳು, ನೋಸ್ ವೀಲ್ ಸ್ಟೀರಿಂಗ್ ಸಿಸ್ಟಮ್ ಬಳಸಿಕೊಂಡು ಆರ್ ಎಲ್ ವಿ ಯಶಸ್ವಿಯಾಗಿ ನಿಂತಿತು ಎಂದು ಇಸ್ರೋ ತಿಳಿಸಿದೆ.